ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಮನೆಗೆಲಸದ ಸಹಾಯಕಿ ಹುಟ್ಟುಹಬ್ಬವನ್ನು ಈ ಕುಟುಂಬ ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದೆ. ಆದರೆ ಆಕೆಯ ಖುಷಿಗೆ ಬೆಲೆ ಕಟ್ಟಲಾಗದು.
ಫೋಟೊಗ್ರಾಫರ್ ವೈರಲ್ ಭಯಾನಿ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿದ್ದು, ಸಹಾಯಕಿ ಹುಟ್ಟುಹಬ್ಬದ ಸಮಯದಲ್ಲಿ ಅವರ ಖುಷಿ, ಮುಗ್ಧತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಎಂದಿನಂತೆ ಮನೆಕೆಲಸಕ್ಕೆ ಬಂದ ಆಕೆಗೆ ಸರ್ಪೈಸ್ ಕಾದಿತ್ತು. ಟೀಪಾಯಿ ಮೇಲೆ ಕೇಕ್ ಇಟ್ಟು, ಹ್ಯಾಪಿ ಬರ್ಥ್ಡೇ ಹೇಳಿದ್ದಾರೆ. ಕೇಕ್ ಕಟ್ ಮಾಡುವಾಗ ಎಲ್ಲಿಯೂ ಇಲ್ಲದ ಸಂತೋಷ ಅವರ ಮುಖದಲ್ಲಿ ಕಾಣುತ್ತದೆ. ಜೀವನದಲ್ಲಿ ಮೊದಲ ಬಾರಿಗೆ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿದ ಖುಷಿ ಅವರದ್ದು.
ಇವರಿಗೆ ದುಬಾರಿ ಗಿಫ್ಟ್ ಬೇಕಿಲ್ಲ, ವಿಶೇಷ ದಿನಗಳಲ್ಲಿ ಚೂರು ಪ್ರೀತಿ ತೋರಿಸಿದರೂ ಸಾಕು. ಗಂಡನ ಜೊತೆ ಇವರು ವಾಸಿಸುತ್ತಾರೆ, ಕುಟುಂಬದಿಂದ ದೂರ ಇದ್ದಾರೆ. ಇವರ ದಿನವನ್ನು ಸ್ಪೆಶಲ್ ಮಾಡುವ ಯೋಚನೆಯಿಂದ ಕೇಕ್ ತಂದು ಕಟ್ ಮಾಡಿಸಿದ್ದೆವು. ನಂತರ ನಾನೇ ಟೀ ಮಾಡಿಕೊಟ್ಟೆ. ನಮ್ಮ ಮನೆ ಶುಚಿಯಾಗಿರಲು ಸಹಾಯ ಮಾಡುವ ಮೌಶಿ ನಿಮಗೆ ಧನ್ಯವಾದ, ದಿನವೂ ಮಲಗುವ ಮುನ್ನ ಯಾರಿಗಾದರೂ ಒಳ್ಳೆಯದು ಮಾಡಿ, ಇದು ನಿಮ್ಮನ್ನು ಜೀವಂತವಾಗಿ ಇರಿಸುತ್ತದೆ ಎಂದು ಹೇಳಿದ್ದಾರೆ.
ಪ್ರತೀ ವರ್ಷ ಹುಟ್ಟುಹಬ್ಬದ ದಿನದಂದು ನಾವು ಮೂರು ನಾಲ್ಕು ಕೇಕ್ ಕತ್ತರಿಸಬಹುದು, ದುಬಾರಿ ಗಿಫ್ಟ್ ಪಡೆಯಬಹುದು. ಆದರೆ ಜೀವನ ಎಲ್ಲರಿಗೂ ಒಂದೇ ಅಲ್ಲ, ನಾವಷ್ಟೇ ಖುಷಿಯಾಗಿರುವ ಬದಲು ಸಣ್ಣ ಖುಷಿಗಳನ್ನು ಹಂಚಿ ಬದುಕಬಹುದಲ್ಲವಾ?
https://www.instagram.com/reel/CkLftP7KnVN/?utm_source=ig_web_copy_link