September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 59 | ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಬೆಸ್ಟ್ ಆಪ್ಷನ್: ಬಿಸಿಬಿಸಿ ಶಾವಿಗೆ ಬಾತ್

ಬೆಳಗ್ಗಿನ ಗಡಿಬಿಡಿಯಲ್ಲಿ ಹೆಲ್ದೀ ಹಾಗೂ ಟೇಸ್ಟಿ ತಿಂಡಿ ಮಾಡಬೇಕಾ? ಹಾಗಾದರೆ ಕೇವಲ 10 ನಿಮಿಷಗಳಲ್ಲಿ ತಯಾರಾಗುವ ಈ ಬಿಸಿಬಿಸಿ ಶಾವಿಗೆ ಬಾತ್ ಬೆಸ್ಟ್ ಆಪ್ಷನ್. ಕಡಿಮೆ ಸಮಯದಲ್ಲಿ, ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಇದನ್ನು ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಶಾವಿಗೆ

ನೀರು

ಈರುಳ್ಳಿ

ತರಕಾರಿಗಳು

ಹಸಿಮೆಣಸಿನಕಾಯಿ

ಕಡಲೆಬೀಜ

ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು

ಎಣ್ಣೆ ಅಥವಾ ತುಪ್ಪ

ನಿಂಬೆಹಣ್ಣು

ಉಪ್ಪು

 ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ 1 ಚಮಚ ತುಪ್ಪ ಅಥವಾ ಎಣ್ಣೆ ಹಾಕಿ ಶಾವಿಗೆಯನ್ನು ಹೊಂಬಣ್ಣ ಬರುವವರೆಗೆ ಲಘುವಾಗಿ ಹುರಿದು ಒಂದು ತಟ್ಟೆಗೆ ಎತ್ತಿಟ್ಟುಕೊಳ್ಳಬೇಕು. ಬಳಿಕ ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಕಡಲೆಬೀಜ ಹಾಕಿ 1 ನಿಮಿಷ ಚೆನ್ನಾಗಿ ಫ್ರೈ ಮಾಡಿ. ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಸೇರಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಅದು ಸಾಫ್ಟ್ ಆಗುವವರೆಗೆ ಹುರಿದು, ಆಮೇಲೆ ಕ್ಯಾರೆಟ್, ಬೀನ್ಸ್, ಬಟಾಣಿ ಹಾಕಿ 2 ನಿಮಿಷ ಎಣ್ಣೆಯಲ್ಲೇ ಚೆನ್ನಾಗಿ ಕೈಯಾಡಿಸಿ.

Must Read