ಹೆಲ್ದಿಯಾಗಿಯೂ ಇರ್ಬೇಕು, ಜೊತೆಗೆ ನಾಲಿಗೆಗೆ ಮಸ್ತ್ ಟೇಸ್ಟ್ ಕೂಡ ಸಿಗ್ಬೇಕು ಅಂದ್ರೆ ಈ ‘ಬ್ರೊಕೊಲಿ ಬೆಲ್ ಪೆಪ್ಪರ್ ಆಮ್ಲೆಟ್’ ಬೆಸ್ಟ್ ಚಾಯ್ಸ್!
ಮೊಟ್ಟೆ
ಬ್ರೊಕೋಲಿ
ಕ್ಯಾಪ್ಸಿಕಂ
ಈರುಳ್ಳಿ
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಪೆಪ್ಪರ್
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಮೊದಲು ಸ್ಟವ್ ಹಚ್ಚಿ ಒಂದು ಪ್ಯಾನ್ ಇಡಿ. ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದಮೇಲೆ ಜಜ್ಜಿದ ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಲೈಟಾಗಿ ಫ್ರೈ ಮಾಡಿ. ಆಮೇಲೆ ಹೆಚ್ಚಿಟ್ಟುಕೊಂಡ ಬ್ರೊಕೋಲಿ ಮತ್ತು ಕ್ಯಾಪ್ಸಿಕಂ ಹಾಕಿ. 2-3 ನಿಮಿಷ ಬಾಡಿಸಿ ಗ್ಯಾಸ್ ಆಫ್ ಮಾಡಿ, ಅದನ್ನು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
ಈಗ ಒಂದು ಬೌಲ್ ತಗೊಂಡು, ಅದಕ್ಕೆ ಎರಡು ಮೊಟ್ಟೆ ಒಡೆದು ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಪೆಪ್ಪರ್ ಪೌಡರ್ ಸೇರಿಸಿ. ಸ್ಪೂನ್ ತಗೊಂಡು ಚೆನ್ನಾಗಿ ಫೋಮ್ ಬರೋವರೆಗೂ ಕಲಸಿ. ಎಷ್ಟು ಚೆನ್ನಾಗಿ ಬೀಟ್ ಮಾಡ್ತೀರೋ, ಆಮ್ಲೇಟ್ ಅಷ್ಟು ಫ್ಲಫ್ಪಿಯಾಗಿ ಬರುತ್ತೆ. ಈಗ ಬೀಟ್ ಮಾಡಿಟ್ಟುಕೊಂಡ ಮೊಟ್ಟೆಗೆ, ಈಗಾಗಲೇ ಫ್ರೈ ಮಾಡಿ ಇಟ್ಟುಕೊಂಡ ಬ್ರೊಕೋಲಿ-ಕ್ಯಾಪ್ಸಿಕಂ ಮಿಶ್ರಣವನ್ನು ಹಾಕಿ, ಜೊತೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮತ್ತೆ ಪ್ಯಾನ್ ಒಲೆ ಮೇಲೆ ಇಟ್ಟು, ಉಳಿದ ಎಣ್ಣೆ ಹಾಕಿ ಬಿಸಿ ಮಾಡಿ. ರೆಡಿ ಮಾಡಿಟ್ಟುಕೊಂಡ ಮೊಟ್ಟೆ ಮಿಶ್ರಣವನ್ನು ಪ್ಯಾನ್ ತುಂಬಾ ಹರಡುವಂತೆ ಹಾಕಿ. 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಮೆಲ್ಲಗೆ ಆಮ್ಲೇಟ್ ಅನ್ನು ಇನ್ನೊಂದು ಕಡೆ ತಿರುಗಿಸಿ ಹಾಕಿ. ಇನ್ನೊಂದು ಬದಿ ಕೂಡ 1 ನಿಮಿಷ ಬೇಯಿಸಿದರೆ, ಬಿಸಿ ಬಿಸಿಯಾದ ಬ್ರೊಕೋಲಿ ಬೆಲ್ ಪೆಪ್ಪರ್ ಆಮ್ಲೇಟ್ ರೆಡಿ!



