August 16, 2026
Sunday, August 16, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 60 | ಸದಾ ಒಂದೇ ತರಹದ ಪೂರಿ ತಿಂದು ಬೇಜಾರಾಗಿದೆಯೇ? ಹಾಗಾದ್ರೆ ಈ ಗ್ರೀನ್ ಪೂರಿ ಟ್ರೈ ಮಾಡಿ

ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಏನಾದರೂ ಸ್ಪೆಷಲ್ ಹಾಗೂ ಡಿಫರೆಂಟ್ ಆಗಿ ಮಾಡಲು ಯೋಚಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಬೆಸ್ಟ್ ಆಪ್ಷನ್. ಸದಾ ಒಂದೇ ತರಹದ ಪೂರಿ ತಿಂದು ಬೇಜಾರಾಗಿದ್ದರೆ ಈ ಗ್ರೀನ್ ಪಾಲಕ್‌ ಪೂರಿ ಟ್ರೈ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು

ಪಾಲಕ್ ಸೊಪ್ಪು

ಹಸಿಮೆಣಸಿನಕಾಯಿ

ಶುಂಠಿ

ಜೀರಿಗೆ

ಓಂಕಾಳು

ಎಣ್ಣೆ

ಉಪ್ಪು

ಮಾಡುವ ವಿಧಾನ

ಮೊದಲು ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ 2 ನಿಮಿಷ ಬೇಯಿಸಿ, ತಕ್ಷಣ ತಣ್ಣಗಿನ ನೀರಿಗೆ ಹಾಕಿ. ಬೇಯಿಸಿದ ಪಾಲಕ್ ಜತೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಗೋಧಿ ಹಿಟ್ಟಿಗೆ ಜೀರಿಗೆ, ಓಂಕಾಳು, ಉಪ್ಪು, 1 ಚಮಚ ಎಣ್ಣೆ ಮತ್ತು ರುಬ್ಬಿದ ಪಾಲಕ್ ಪೇಸ್ಟ್ ಹಾಕಿ ಗಟ್ಟಿಯಾಗಿ ಕಲಸಿ. ಬಳಿಕ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ, ಪೂರಿ ಲಟ್ಟಿಸಿ, ಚೆನ್ನಾಗಿ ಕಾದ ಎಣ್ಣೆಯಲ್ಲಿ ಹಾಕಿ ಉಬ್ಬುವವರೆಗೆ ಕರಿದು ತೆಗೆದರೆ ಬಿಸಿಬಿಸಿ ಪಾಲಕ್‌ ಪೂರಿ ಸಿದ್ದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar