July 21, 2026
Tuesday, July 21, 2026
spot_img

ಜಿಪ್‌ಲೈನ್ ದುರಂತ : ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ದಾಂಡೇಲಿ

ದಾಂಡೇಲಿ : ತಾಲೂಕಿನ ಕೋಗಿಲಬನ – ಬಡಕಾನಶಿರಡಾ ಗ್ರಾ.ಪಂ ವ್ಯಾಪ್ತಿಯ ಬಡಕಾನಶಿರಡಾದಲ್ಲಿರುವ ಸ್ಟಾರ್ಲಿಂಗ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಅಪಘಾತದಲ್ಲಿ ಪ್ರವಾಸಿಗರೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

ಜುಲೈ 3ರಂದು ನಡೆದ ಈ ಘಟನೆಯಲ್ಲಿ ಕುಬೇರ ಸುರುಪುರ (40) ಎಂಬ ಪ್ರವಾಸಿಗ ಜಿಪ್‌ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವೇಳೆ ಸುರಕ್ಷತಾ ಬೆಲ್ಟ್ (ಹಾರ್ನೆಸ್) ತುಂಡಾಗಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೆಸಾರ್ಟ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ, ಪವನ್ ಮೇಲೆಬಿ.ಎನ್.ಎಸ್ ಕಲಂ‌289 ,125(B) ,ಸಹಿತ 3(5) ಬಿ.ಎನ್.ಎಸ್ 2023 ,ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !