ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್: ದೊಡ್ಮನೆಯಿಂದ ಹೊರಬಂದ ಅಮೂಲ್ಯ, ಅರುಣ್ ಸಾಗರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕನ್ನಡ ಬಿಗ್ ಬಾಸ್ ಕೊನೆಯ ಘಟ್ಟಕ್ಕೆ ತಲುಪಿದ್ದು, ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. ಇದೀಗ 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ದೊಡ್ಮನೆಯಿಂದ ಹೊರಬಂದಿದ್ದಾರೆ.

ನಟ, ಖಳ ನಟ, ಹೀಗೆ ಸಾಕಷ್ಟು ಪಾತ್ರಗಳ ಮೂಲಕ ಬೆಳ್ಳಿ ಪರದೆಯಲ್ಲಿ ರಂಜಿಸಿದ್ದ ಅರುಣ್ ಸಾಗರ್, ಬಿಗ್ ಬಾಸ್ ಸೀಸನ್ 1ರ ರನ್ನರ್ ಅಪ್ ಆಗಿದ್ದರು. ಬಳಿಕ ಸೀಸನ್ 9ರಲ್ಲೂ ರಂಜಿಸಿ ಸೈ ಎನಿಸಿಕೊಂಡಿದ್ದರು. ತಮ್ಮ ಆಟ , ನಗು ಮಾತಿನ ಮೂಲಕ ಎಲ್ಲರಿಗು ಇಷ್ಟವಾಗುತ್ತಿದ್ದರು. ಆದ್ರೆ ಆರೋಗ್ಯದಿಂದ ಕೊಂಚ ಎಡವಿದ್ದಾರೆ‌. ಆದರೆ 14 ವಾರಕ್ಕೆ ಅರುಣ್ ಸಾಗರ್ ಆಟ ಅಂತ್ಯವಾಗಿದೆ.

ಇತ್ತ ‘ಕಮಲಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಅಮೂಲ್ಯ ಗೌಡ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಅಂತಾ ಇತರೆ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೋಡಿದ್ದರು. ಆದರೆ ಅಮೂಲ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.

ಕನ್ನಡದ ಬಿಗ್ ಬಾಸ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಕು ಬಿಗ್ ಬಾಸ್ ಫಿನಾಲೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!