ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಮಾತುಗಳಿಂದ ವಿಚಾರಗಳಿಂದ ಸದಾ ಸುದ್ದಿಯಾಗೋ ಕಂಗನಾ ರನೌತ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.
ನಟಿ ಕಂಗನಾ ಸ್ವತಃ ಈ ಕೊಲೆ ಬೆದರಿಕೆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಸಿಖ್ ಸಮುದಾಯದ ಕೆಲ ವ್ಯಕ್ತಿಗಳು ಕೋಣೆಯೊಂದರಲ್ಲಿ ಕುಳಿತು ವಿಡಿಯೋ ಮಾಡಿದ್ದು, ವಿಡಿಯೋನಲ್ಲಿ ಕಂಗನಾರನ್ನು ಉದ್ದೇಶಿಸಿ ಮಾತನಾಡಿರುವ ಒಬ್ಬ ವ್ಯಕ್ತಿ, ‘ಒಂದೊಮ್ಮೆ ನೀನು ಈ ಸಿನಿಮಾ ಬಿಡುಗಡೆ ಮಾಡಿದರೆ ಪಂಜಾಬಿಯರಿಂದ ಹೇಗಾದರೂ ಚಪ್ಪಲಿಯಲ್ಲಿ ಹೊಡೆತ ತಿಂದೇ ತಿನ್ನುತ್ತೀಯ ಮಾತ್ರವಲ್ಲದೆ, ಕ್ರಿಶ್ಚಿಯನ್, ಮುಸ್ಲಿಂ ಇತರೆ ಹಿಂದೂಗಳು ಸಹ ನಿನ್ನನ್ನು ಚಪ್ಪಲಿಯಿಂದ ಸ್ವಾಗತ ಮಾಡಲಿದ್ದಾರೆ’ ಎಂದಿದ್ದಾರೆ.