ಮಗನ ಸಾವಿನ ಬಗ್ಗೆ ಅನುಮಾನ: ಹೂತಿದ್ದ ಮೃತದೇಹ ಹೊರತೆಗೆಸಿದ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಗನ ಸಾವಿನ ಸಂಬಂಧ ಪೋಷಕರು ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹೂತಿದ್ದ 3 ವರ್ಷದ ಬಾಲಕನ ಶವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ನವಲಗುಂದ ತಾಲೂಕಿನ ಯಮನ್ನೂರು ಗ್ರಾಮದಲ್ಲಿ ಮೂರು ವರ್ಷದ ಬಾಲಕನ ಮೃತದೇಹವನ್ನು ಆತನ ಸಮಾಧಿಯಿಂದ ಹೊರತೆಗೆಯಲಾಗಿದೆ. ಕೃಷಿ ಉಪಕರಣ ಮೇಲೆ ಬಿದ್ದು ಇತ್ತೀಚೆಗೆ ಬಾಲಕ ಮೃತಪಟ್ಟಿದ್ದನು. ತಮ್ಮ ಮಗನ ಸಾವಿನಲ್ಲಿ ಏನೋ ಪಿತೂರಿ ನಡೆದಿದೆ ಎಂದು ಎಂದು ಪೋಷಕರು ದೂರಿದ್ದಾರೆ.

ಭಾರೀ ಗಾತ್ರದ ಕೃಷಿ ಉಪಕರಣದ ತುಂಡು ಮಗುವಿನ ಮೇಲೆ ಬಿದ್ದಾಗ, ಮಗುವಿನ ತಲೆಗೆ ತೀವ್ರವಾದ ಗಾಯಗಳು ಮತ್ತು ಅಪಾರ ರಕ್ತಸ್ರಾವದಿಂದ ನೆರೆ ಮನೆಯಲ್ಲಿ ಮಗು ಸಾವನ್ನಪ್ಪಿತ್ತು. ಮೃತ ಮಗುವಿನ ಪಾಲಕರಾದ ವೆಂಕಪ್ಪ ಮತ್ತು ಶಾಂತಾ ನೀಡಿದ ದೂರಿನ ಮೇರೆಗೆ ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮಣ್ಣೆತ್ತುವ ಯಂತ್ರದ ಸಹಾಯದಿಂದ ಹೊರತೆಗೆದಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬಾಲಕ ಯಲ್ಲಪ್ಪ ತಮ್ಮ ನೆರೆಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕೃಷಿ ಉಪಕರಣಗಳು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಇಲ್ಲಿಯವರೆಗೆ ನಂಬಲಾಗಿತ್ತು, ಈಗ ಪೋಷಕರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬೈಕೋಡ್ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!