October 10, 2026
Saturday, October 10, 2026
spot_img

CINE | ಖರ್ಚು ಮಾಡಿದ ಹಣ ವಾಪಾಸ್‌ ಬರೋದು ಡೌಟ್‌, ಫ್ಲಾಪ್‌ ಆಯ್ತಾ ಹೈ ಜವಾನಿ ತೋ ಇಷ್ಕ್ ಹೋನಾ ಹೈ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರುಣ್‌ ಧವನ್‌, ಮೃಣಾಲ್‌ ಠಾಕೂರ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಸಿನಿಮಾ ಥಿಯೇಟರ್ಸ್‌ಗೆ ಲಗ್ಗೆ ಇಟ್ಟಿದೆ. ಆದರೆ ಕಲೆಕ್ಷನ್‌ ಇಲ್ಲದೆ ಸಂಪೂರ್ಣ ಮಕಾಡೆ ಮಲಗುವ ಸಾಧ್ಯತೆ ಎದ್ದು ಕಾಣಿಸುತ್ತಿದೆ.

ವೀಕೆಂಡ್‌ ಮುಗಿದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಚಿತ್ರದ ಗಳಿಕೆಯಲ್ಲಿ ಯಾವ ಬದಲಾವಣೆ ಕಾಣಿಸಿಲ್ಲ. ಪ್ರಸ್ತುತ ದೇಶಾದ್ಯಂತ 1,380 ಶೋಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದ್ದರೂ ಪ್ರೇಕ್ಷಕರು ಇಲ್ಲದೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ.

ಈವರೆಗೂ ಸಿನಿಮಾ ಕಲೆಕ್ಷನ್‌ ಬರೀ 24.08 ಕೋಟಿ ರೂಪಾಯಿ ಆಗಿದೆ. ಸಿನಿಮಾ ಮಾಡೋದಕ್ಕೆ ನಿರ್ಮಾಪಕರು ಬರೋಬ್ಬರಿ 55 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಹಣ ಖರ್ಚು ಮಾಡಿದಷ್ಟೂ ವಾಪಾಸ್‌ ಬರೋದಿಲ್ಲ ಎಂದು ತಿಳಿದು ನಿರ್ಮಾಪಕರು ಬೇಸರದಲ್ಲಿದ್ದಾರೆ.

Must Read