Thursday, March 30, 2023

Latest Posts

ಬಾಲಿವುಡ್ ನಟ ಸತೀಶ್ ಕೌಶಿಕ್ ಸಾವಿನ ಸುತ್ತ ಅನುಮಾನ: ತನ್ನ ಪತಿಯೇ ಕೊಲೆ ಮಾಡಿದ್ದೂ ಎಂದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ, ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಹೃದಯಾಘಾತದಿಂದ ಸಾವನ್ನಪ್ಪಿದ್ದು ಎಂದು ಹೇಳಲಾಗಿತ್ತು, ಆದರೆ ಈ ಇದೀಗ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ.

ಈ ಸಾವಿನ ಹಿಂದೆ 15 ಕೋಟಿ ರೂಪಾಯಿಗಳಿಗಾಗಿ ನಡೆದ ಕೊಲೆ ಎಂದು ದೂರು ದಾಖಲಾಗಿದೆ. ದೆಹಲಿ ಮೂಲದ ಉದ್ಯಮಿಯೊಬ್ಬರ ಪತ್ನಿಯು, ತನ್ನ ಪತಿ ಮೇಲೆಯೇ ಈ ಕೊಲೆಯ ಆರೋಪವನ್ನೂ ಮಾಡಿದ್ದಾರೆ. ಕಲೆ ಮಾತ್ರೆಗಳು ನೀಡಿ ಸತೀಶ್ ಅವರನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ದೆಹಲಿ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಮಹಿಳೆ, ಎರಡು ದಿನಗಳ ಹಿಂದೆ ನಡೆದ ಹೋಳಿ ಆಚರಣೆಗಾಗಿ ಸತೀಶ್ ಫಾರ್ಮ್ ಹೌಸ್ ಗೆ ಬಂದಿದ್ದರು. ಅಲ್ಲಿ ಔಷಧಿ ನೀಡಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಣದ ವ್ಯವಹಾರಕ್ಕಾಗಿ ಸತೀಶ್ ಮತ್ತು ತಮ್ಮ ಪತಿ ದೆಹಲಿ ಮತ್ತು ದುಬೈನಲ್ಲಿ ಭೇಟಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ ಸಿಕ್ಕಿದೆ ಎಂದು ಗೊತ್ತಾಗಿದೆ.

ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!