ರಷ್ಯಾ ವಿರುದ್ಧ ಹೋರಾಡಲು ಸ್ವಯಂ ಪ್ರೇರಿತರಾಗಿ ಉಕ್ರೇನಿಗೆ ಬರಲಿದ್ದಾರೆ 70 ಜಪಾನಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಒಂದು ವಾರದಿಂದ ಉಕ್ರೇನ್‌ ಮೇಲೆ ರಷ್ಯಾದ ನಿರಂತರ ದಾಳಿ ನಡೆಯುತ್ತಿದ್ದು, ಉಕ್ರೇನ್‌ ನ ಎರಡು ಪ್ರಮುಖ ನಗರಗಳನ್ನು ರಷ್ಯಾ ಈಗಾಗಲೇ ವಶಕ್ಕೆ ಪಡೆದುಕೊಂಡಿದೆ.
ಈ ನಡುವೆ ವಿಶ್ವದ ಬಹುತೇಕ ರಷ್ಟ್ರಗಳು ಉಕ್ರೇನ್‌ ಗೆ ನೆರವಿನ ಹಸ್ತ ಚಾಚಿದ್ದು, ಈಗ ಜಪಾನ್‌ ನ ಸುಮಾರು 70 ಜನರು ಸ್ವಯಂ ಪ್ರೇರಿತರಾಗಿ ಉಕ್ರೇನ್‌ ಪರ ಹೋರಾಡಲು ಉಕ್ರೇನ್‌ ಗೆ ಬರಲಿದ್ದಾರೆ.
ಇವರಲ್ಲಿ 50 ಮಂದಿ ಜಪಾನ್‌ನ ಸ್ವ-ರಕ್ಷಣಾ ಪಡೆಗಳ ಮಾಜಿ ಸದಸ್ಯರು ಮತ್ತು ಫ್ರೆಂಚ್ ಫಾರಿನ್ ಲೀಜನ್‌ನ ಇಬ್ಬರು ಅನುಭವಿಗಳು ಸ್ವಯಂ ಸೇವಕರಾಗಿ ಯುದ್ಧ ಭೂಮಿಗೆ ಬರಲು ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಂತಾರಾಷ್ಟ್ರೀಯ ಸೈನ್ಯ ರಚನೆಗೆ ಹಾಗೂ ಉಕ್ರೇನ್‌ ಉಳಿಸಲು ಹೋರಾಡುವಂತೆ ಕರೆ ನೀಡಿದ್ದರು.
ಜಪಾನ್‌ ನಿಂದ ಹೋರಾಡಲು ಬರುತ್ತಿರುವವರಿಗೆ ಉಕ್ರೇನ್‌ ರಾಯಭಾರ ಕಚೇರಿ ಧನ್ಯವಾದ ತಿಳಸಿದ್ದು, ಅನುಭವಿಗಳು ಹಾಗೂ ವಿಶೇಷ ತರಬೇತಿ ಪಡೆದವರನ್ನು ಮಾತ್ರ ಯುದ್ಧದಲ್ಲಿ ಭಾಗಿಯಾಗುವಂತೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!