Sunday, October 1, 2023

Latest Posts

ದುರಂತ ಘಟನೆ: ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ನೀರುಪಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯನೊಬ್ಬ ಸಮುದ್ರ ಪಾಲಾಗಿರುವ ದುರಂತ ಘಟನೆ ಮಂಗಳೂರಿನ ಸೋಮೇಶ್ವರ ರುದ್ರಪಾದೆ ಬಳಿ ನಿನ್ನೆ ತಡರಾತ್ರಿ ನಡೆದಿದೆ.

ಆಶಿಕ್ ಗೌಡ (30) ಮೃತ ದುರ್ದೈವಿ. ಬೆಂಗಳೂರಿನವರಾದ ಆಶಿಕ್ ಗೌಡ, ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು.

ಆಶಿಕ್ ಗೌಡ, ಡಾ.ಪ್ರದೀಶ್ ಸೇರಿದಂತೆ ಐವರು ವೈದ್ಯರು ನಿನ್ನೆ ತಡರಾತ್ರಿ ಸೋಮೇಶ್ವರ ಕಡಲಿಗೆ ಸಮುದ್ರ ವಿಹಾರಕ್ಕೆ ತೆರಳಿದ್ದರು. ಈ ವೇಳೆ ರುದ್ರಪಾದೆ ಬಳಿ ಕಲ್ಲಿನ ಬಂಡೆಯ ಮೇಲೆ ನಿಂತಿದ್ದ ಡಾ.ಪ್ರದೀಶ್ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಅವರ ರಕ್ಷಣೆಗಾಗಿ ಮುಂದಾದ ಆಶಿಕ್ ಗೌಡ, ಕಾಲು ಜಾರಿ ಸಮುದ್ರ ಪಾಲಾಗಿದ್ದಾರೆ.
ಬಳಿಕ ಕಲ್ಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ದಡಕ್ಕೆ ಬಂದು ಪ್ರದೀಶ್ ಜೀವ ಉಳಿಸಿಕೊಂಡಿದ್ದಾರೆ. ಆದರೆ ಸ್ನೇಹಿತನ ರಕ್ಷಣೆಗೆ ಹೋಗಿ ಆಶಿಕ್ ಸಮುದ್ರ ಪಾಲಾಗಿರುವುದು ದುರಂತ.

ಈ ಘಟನೆಯ ಬಗ್ಗೆ ಪ್ರದೀಶ್ ತಕ್ಷಣವೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ರುದ್ರಪಾದೆ ಬಳಿ ಇಂದು ಬೆಳಿಗ್ಗೆ ಆಶಿಕ್ ಮೃತದೇಹ ಸಿಕ್ಕಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!