ಹೊಸದಿಗಂತ ವರದಿ,ಅಂಕೋಲಾ:
ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ಮಾಹಾಮಾಯಾ ದೇವಸ್ಥಾನಕ್ಕೆ ರಾಜ್ಯಸಭಾ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಸ್ಥಾನದ ಧರ್ಮದರ್ಶಿ ರವಳನಾಥ ಘೋಡೆ, ಶ್ರೀ ಶಾಂತಾದುರ್ಗಾ ದೇವಸ್ಥಾನ ಟ್ರಸ್ಟಿ ಅಶೋಕ ಮಹಾಲೆ, ಪ್ರಮುಖರಾದ ಭಾಸ್ಕರ ನಾರ್ವೇಕರ್, ರಾಮನಾಥ ಬಾಳಿಗಾ , ಉಮೇಶ ನಾಯ್ಕ, ನಾಗೇಂದ್ರ ನಾಯ್ಕ, ನಾಗೇಶ ನಾಯ್ಕ, ಅನಿಲ ಮಹಾಲೆ, ನಿರ್ದೇಶಕ ಮಹೇಶ ಎಂ.ಡಿ, ಯೋಜನಾಧಿಕಾರಿಗಳಾದ ಮಮತಾ ನಾಯ್ಕ, ಕುಮಟಾದ ಕಲ್ಮೇಶ, ಕಾರವಾರದ ವಿನಾಯಕ ನಾಯ್ಕ ಮತ್ತಿತರರು ಇದ್ದರು.