Sunday, December 10, 2023

Latest Posts

ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿಗೆ ಡಾ. ಎಸ್. ಎಂ. ಜಾಮದಾರ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಡಾ.ಶಿವಾನಂದ ಜಾಮದಾರ ಅವರು ಜೆ. ಎಚ್. ಪಟೇಲರ ಸರ್ಕಾರದಲ್ಲಿ ಅವರು ವಹಿಸಿಕೊಂಡ ಕಂದಾಯ ಇಲಾಖೆ ಹಾಗೂ ಕೂಡಲಸಂಗಮ, ಬಸವಕಲ್ಯಾಣ, ಕಾಗಿನೆಲೆ, ಇವುಗಳ ಅಭಿವೃದ್ಧಿ ಪ್ರಾಧಿಕಾರಗಳ ಮುಖ್ಯಸ್ಥರಾಗಿ ಅವರು ಮಾಡಿದ ಆ ಕ್ಷೇತ್ರಗಳ ಅಭಿವೃದ್ಧಿ ಒಂದು ಐತಿಹಾಸಿಕ ದಾಖಲೆ. ಯು.ಕೆ.ಪಿ. ಆಯುಕ್ತರಾಗಿ ಆಲಮಟ್ಟಿ ಡ್ಯಾಂ ಪೂರ್ಣಗೊಳಿಸಿದರು.

ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಅನು?ನ, ಬಾಗಲಕೋಟೆಯ ನವನಗರದ ನಿರ್ಮಾಣ ಮುಂತಾದ ಸಾಧನೆಗಳು ಜಾಮದಾರರನ್ನು ಸಮಸ್ತ ಕರ್ನಾಟಕದ ಜನತೆಗೆ ಪರಿಚಯಿಸಿದವು.

ಈ ಎಲ್ಲ ಮಹತ್ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಸಾಲಿನ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪುರಸ್ಕಾರದ ಗೌರವವನ್ನು ಐದು ಲಕ್ಷಗಳ ಗೌರವ ಧನ ಹಾಗೂ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ತೊಂಟದಾರ್ಯ ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!