ಹೊಸದಿಗಂತ ವರದಿ ಕೊಪ್ಪಳ:
ಡಾ.ಜಿ.ಪರಮೇಶ್ವರ ಅವರು ಅಟ್ಟರ್ ಫ್ಲಾಪ್ ಹೋಂ ಮಿನಿಸ್ಟರ್ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ದೂರಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟ ವಾಗಿತ್ತು. ಎನ್ ಐ ಎ ಜಾಜ್೯ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಬಾಂಬ್ ದಾಳಿ ಬಿಜೆಪಿ ರಾಜ್ಯ ಕಚೇರಿ ಮೇಲೆ ನಡೆಯುತ್ತಿತ್ತು ಎಂದು ಉಲ್ಲೇಖಿಸಿದೆ. ರಾಜ್ಯದಲ್ಲಿ ಗೃಹ ಇಲಾಖೆ ನಿದ್ರೆ ಮಾಡುತ್ತಿದೆಯಾ? ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿರುವುದರಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಡಾ.ಜಿ.ಪರಮೇಶ್ವರ ಅಟ್ಟರ್ ಫ್ಲಾಪ್ ಹೋಂ ಮಿನಿಸ್ಟರ್ ಎಂದು ಆರೋಪಿಸಿದರು.
ಗೃಹ ಸಚಿವರ ವೈಫಲ್ಯ, ನಿಷ್ಕ್ರಿಯತೆಯಿಂದ ರಾಜ್ಯದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಿದೆ. ಕಾಂಗ್ರೆಸ್ ಪೊಲೀಸರನ್ನು ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹಚ್ಚು ಅಪರಾಧ ಪ್ರಕರಣ ನಡೆಯುತ್ತಿವೆ ಎಂದರು.
ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತವನ್ನು ಅವಮಾನಿಸುವಂತೆ ಮಾತನಾಡುತ್ತಿದ್ದಾರೆ. ವಾಜಪೇಯಿ ಅವರು ಸದನದಲ್ಲಿ ಇಂದಿರಾಗಾಂಧಿ ಅವರನ್ನು ವಿರೋಧಿಸುತ್ತಿದ್ದರು. ಆದರೆ, ವಿದೇಶಿ ನೆಲದಲ್ಲಿ ದೇಶ ಹಾಗೂ ಪ್ರಧಾನಮಂತ್ರಿ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಆದರೆ, ರಾಹುಲ್ ಗಾಂಧಿ ಅಸಮರ್ಥತೆ ಎತ್ತಿ ತೋರಿಸುವಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು.
ನೂರಕ್ಕೆ ನೂರು ಹೌದು.ಬಾಲಿಶಃ ಹೇಳಿಕೆಗಳು,ಅಪರಾಧ/
ಅಪರಾಧಿಗಳ ಬಗ್ಗೆ ಹಗುರವಾದ ಹೇಳಿಕೆ/ಧೋರಣೆ. ಇಷ್ಟಕ್ಕೂ ಮಂತ್ರಿಮಂಡಲದ ಎಲ್ಲಾ ಮಂತ್ರಿಗಳೂ ತಮ್ಮ ಖಾತೆಗಳ ಬಗ್ಗೆ ಗಂಭೀರವಾಗಿ ಯೋಚಿಸುವುದೂ ಕನಸಲ್ಲೇನೋ.ಇವರಿಗೇನೂ ನಷ್ಟವಿಲ್ಲ.ಸರಕಾರಿ ನೌಕರರ ಸಂಬಳವೂ ವಿಳಂಬ,ಅಭಿವೃದ್ಧಿ ಯೋಜನೆಗಳೆಲ್ಲವೂ
ಸರಕಾರ ಐದು ವರ್ಷ ಉಳಿದರೆ ಅರಾಜಕತೆಯ ಹಾದಿಗೆ
” ಗ್ಯಾರಂಟಿ “.ಬಹುಶಃ ಮುಂದಿನ ಸರಕಾರಕ್ಕೆ ಹಳ್ಳ ತೋಡಲು
ಮತ್ತು ತಮ್ಮ ಜೇಬು ತುಂಬಿಸಿಕೊಳ್ಳುವ ಹಲವು ಇಲಾಖಾ ನೇಮಕಾತಿ ಆಗುವುದು ” ಗ್ಯಾರಂಟಿ “
ಮನುವ್ಯಾದಿಗಳ ನಿಷ್ಠ ಭಕ್ತ ಪ್ರಧಾನ ಕಾರ್ಯದರ್ಶಿಗೆ ಬಹುಶಃ ತನ್ನ ಪಕ್ಷದ ಬಗ್ಗೆ ಇನ್ನೂ ಜ್ಞಾನೋದಯ ಆಗಿಲ್ಲಾಂತ ಕಾಣುತ್ತದೆ,,, ಇವರು ಅಧಿಕಾರದಲ್ಲಿ ಇದ್ದರೂ ರಾಜ್ಯ ದೇಶ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ,, ಅಧಿಕಾರದಲ್ಲಿ ಇರದೇ ಇದ್ದರಂತೂ ಒಂದಲ್ಲ ಒಂದು ವಿವಾದ ಸೃಷ್ಟಿಸಿ ಸಮಾಜದಲ್ಲಿ ನೆಮ್ಮದಿ ಸೌಹಾರ್ದ ಇರದಂತೆ ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡುವರು,, ಜನರು ನೆಮ್ಮದಿಯಿಂದ ಇದ್ದರೆ ಇವರನ್ನು ಇವರ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವರು,, ಅದಕ್ಕೆ ಜನರು ಯಾವತ್ತೂ ಅಶಾಂತಿಯಿಂದ ಇರುವಂತೆ ನೋಡಿಕೊಳ್ಳುವರು,, ಲೋಕಸಭಾ ಚುನಾವಣೆಯಿಂದ ಪತನ ಸುರು ಆಗಿದೆ ಕೊನೆ ಮೊಳೆ ಹೊಡೆಯುವುದು ನಿಚ್ಚಳವಾಗಿ ಕಾಣುತ್ತಿದೆ