ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡು ಬೇಸರದಲ್ಲಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಬಿಜೆಪಿ ವರಿಷ್ಠರು ಮತ್ತೆ ಮಣೆ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿ ಮತ್ತೆ ಸುಧಾಕರ್‌ರನ್ನು ಗೆಲುವಾಗಿಸಿದ್ದಾರೆ. ಟಿಕೆಟ್ ಪಡೆದ ನಂತರ ಸುಧಾಕರ್ ಮಾತನಾಡಿದ್ದು, ಟಿಕೆಟ್ ನೀಡಿದ ಎಲ್ಲರಿಗೂ ಅನಂತ ಅನಂತ ವಂದನೆಗಳು.
ಇಂಥ ಸಮಯದಲ್ಲಿ ಟಿಕೆಟ್ ಸಿಕ್ಕಿರುವುದು ನನ್ನ ಅದೃಷ್ಟ, ಯಾರಿಗೂ ನಿರಾಸೆಯಾಗದಂತೆ ಅಭಿವೃದ್ಧಿಯೇ ಧ್ಯೇಯ ಎಂದುಕೊಳ್ಳುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿದ್ದೀನಿ. ಇನ್ನು ಎಷ್ಟೆಲ್ಲಾ ಕೆಲಸ ಮಾಡಿ ನಮ್ಮೂರನ್ನು ಹೇಗೆ ಬದಲಾಯಿಸುತ್ತೀನಿ ನೋಡಿ ಎಂದು ಭರವಸೆ ನೀಡಿದ್ದಾರೆ.