ಜೈಲಿನಲ್ಲಿ ಕೌಶಲ್ಯ ಕಲಿಸಿಕೊಟ್ಟರೆ ಅದೇ ’ಕೌಶಲ್ಯ’ ಬಳಸಿ ಖೋಟಾ ನೋಟು ಪ್ರಿಂಟು ಮಾಡಿದ ಭೂಪೇಂದ್ರ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದುಕಿನಲ್ಲಿ ಸುಧಾರಣೆಯಾಗಲಿ, ಸ್ವ ಉದ್ಯೋಗ ನಡೆಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲಿ ಎಂಬ ಉದ್ದೇಶದಿಂದ ಶಿಕ್ಷೆಗೊಳಗಾಗಿ ಜೈಲುಪಾಲಾದ ಕೈದಿಗೆ ಮುದ್ರಣ ಕೌಶಲ್ಯ ಕಲಿಸಿಕೊಟ್ಟರೆ, ಆತ ಜೈಲಿನಿಂದ ಹೊರಬಂದು ಅದೇ ‘ಕೌಶಲ್ಯ’ದಿಂದ ಖೋಟಾ ನೋಟು ಮುದ್ರಿಸಿ ಮತ್ತೆ ಜೈಲುಪಾಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭೂಪೇಂದ್ರ ಸಿಂಗ್ ಧಾಕತ್ ಎಂಬಾತ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿ ಜೈಲು ಸೇರಿದ್ದ. ಅಲ್ಲಿ ಈತನಿಗೆ ಮುದ್ರಣ ಕೌಶಲ್ಯ ಕಲಿಸಿಕೊಡಲಾಗಿತ್ತು. ಜೈಲು ಶಿಕ್ಷೆಯ ಬಳಿಕ ತೆರಳಿದ ಈತ ಕೋಟಾ ನೋಟು ಚಲಾವಣೆ ಪ್ರಕರಣ ವೊಂದರಲ್ಲಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ಸಂದರ್ಭ ಈತ ಜೈಲಿನಲ್ಲಿ ಕಲಿತ ‘ಕೌಶಲ್ಯ’ ಬಳಸಿ ಈ ಕೃತ್ಯ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಅಲ್ಲದೆ ಕಳೆದ ಕೆಲವು ತಿಂಗಳಿನಿಂದ ನಕಲಿ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದೆ ಎಂದೂ ತಪ್ಪೊಪ್ಪಿಕೊಂಡಿದ್ದಾನೆ.

ಇದೀಗ ಭೂಪೇಂದ್ರನ ಮನೆಯಿಂದ ಖೋಟಾ ನೋಟು ಸಹಿತ ಕಲರ್ ಪ್ರಿಂಟರ್, ಇಂಕ್ ಬಾಟಲ್, ನಕಲಿ ನೋಟುಗಳ ಮುದ್ರಣಕ್ಕೆ ಬಳಕೆ ಮಾಡುತ್ತಿದ್ದ ಪೇಪರ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಭೂಪೇಂದ್ರ ಮತ್ತೆ ಜೈಲೂಟಕ್ಕೆ ತೆರಳಿದ್ದಾನೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!