ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರುಭಾನುವಾರ ಸಂಜೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದರು.
ಬಳಿಕ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಭಾಗವತ್ ಅವರಿಗೆ ಸನಾತನ ಧರ್ಮ ಸಂರಕ್ಷಣೆಯಲ್ಲಿ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ‘ಹಿಂದು ಸಾಮ್ರಾಟ್’ ಎಂಬ ಬಿರುದು ಹಾಗೂ ‘ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ’ ಸಹಿತ ಗೌರವಿಸಿದರು. ಶ್ರೀ ಕೃಷ್ಣನ ಪ್ರಸಾದ, ರಜತ ಫಲಕ ಮತ್ತು ಬೃಹತ್ ಕಡೆಗೋಲುಗಳನ್ನು ಸ್ಮರಣಿಕೆಯಾಗಿ ನೀಡಿದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥರು, ಸಂಘದ ಹಿರಿಯರಾದ ಮುಕುಂದ, ಗುರುಪ್ರಸಾದ್, ವಾದಿರಾಜ್, ಕೆ.ಪಿ ಶೆಟ್ಟಿ, ನಾರಾಯಣ ಶೆಣೈ, ಲಕ್ಷ್ಮೀನಾರಾಯಣ ಮಟ್ಟು, ಮಠದ ದಿವಾನರಾದ ಎಂ ನಾಗರಾಜ ಆಚಾರ್ಯ ಮುಂತಾದವರಿದ್ದರು.