ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಡಾ ವಿಷ್ಣುವರ್ಧನ್ 14ನೇ ಪುಣ್ಯಸ್ಮರಣೆ. ಈ ದಿನ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ನೆರೆದಿದ್ದು, ಸ್ವತಃ ತಾವೇ ತಮ್ಮ ನೆಚ್ಚಿನ ನಟನಿಗೆ ಪೂಜೆ ಮಾಡಿದ್ದಾರೆ.
ಪುಣ್ಯಸ್ಮರಣೆ ಅಂಗವಾಗಿ ನೇತ್ರದಾನ, ರಕ್ತದಾನ, ಅನ್ನದಾನ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಪುಣ್ಯ ಸಮಾಧಿಗಾಗಿ ವಿಷ್ಣು ಅಭಿಮಾನಿಗಳು ಹೋರಾಟ ನಡೆಸುತ್ತಿದ್ದು, ಅಭಿಮಾನ್ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.