ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಟ ವಿಜಯ್ ದೇವರಕೊಂಡ ಜನ್ಮದಿನ, ಡ್ರೀಮ್ ಬಾಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಖುಷಿ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಗಿಫ್ಟ್ ಒಂದನ್ನು ಅಭಿಮಾನಿಗಳಿಗೆ ಚಿತ್ರತಂಡ ನೀಡುತ್ತಿದೆ.
ಹೌದು, ಖುಷಿ ಚಿತ್ರದ ಮೊದಲ ಹಾಡು ಇಂದು ರಿಲೀಸ್ ಆಗಲಿದೆ, ವಿಜಯ್ ಹುಟ್ಟುಹಬ್ಬದಂದೇ ಹಾಡನ್ನು ರಿಲೀಸ್ ಮಾಡಬೇಕು ಎಂದು ತಂಡ ಪ್ಲಾನ್ ಮಾಡಿದ್ದು, ಇದೀಗ ಸಿನಿಮಾ ಹಾಡು ರಿಲೀಸ್ ಆಗಲಿದೆ. ಲೈಗರ್ ಸೋಲಿನ ನಂತರ ವಿಜಯ್ ಸಾಕಷ್ಟು ಕುಗ್ಗಿದ್ದು, ಖುಷಿ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಹಾಡು ಹೇಗಿರಲಿದೆ? ಕಾದು ನೋಡಬೇಕಷ್ಟೇ