ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವ್ಯಕ್ತಿ ಕಣ್ಣು ಮಿಟಿಕಿಸುವಷ್ಟರಲ್ಲಿ ಬಹುಮಹಡಿ ಕಟ್ಟಡಗಳನ್ನು ಬಹಳ ಸುಲಭವಾಗಿ ಏರುತ್ತಾನೆ. ಹಾಗಂತ ಇವನೇನು ಸಿನಿಮಾ ಹೀರೋ ಅಲ್ಲ, ಸ್ಪೈಡರ್ ಮ್ಯಾನ್ ಕೂಡ ಅಲ್ಲ ಬದಲಿಗೆ ಓರ್ವ ಕಳ್ಳ.
ಪಶ್ಚಿಮ ದೆಹಲಿಯಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಪೈಡರ್ ಮ್ಯಾನ್ ನಂತಹ ನಾಲ್ಕು ಅಂತಸ್ತಿನ ಕಟ್ಟಡವನ್ನು ಕಳ್ಳನೊಬ್ಬ ಒಂದು ನಿಮಿಷದಲ್ಲಿ ಏರಿದ್ದಾನೆ. ಆ ಕಟ್ಟಡಕ್ಕೆ ಪೈಪ್ ಇದೆ. ಆ ಪೈಪ್ ಆಧರಿಸಿ ಕಳ್ಳ ನಾಲ್ಕಂತಸ್ತಿನ ಕಟ್ಟಡ ಹತ್ತಿದ. ಆ ಕಟ್ಟಡದಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಕಟ್ಟಡದಲ್ಲಿದ್ದ ವ್ಯಕ್ತಿಯೊಬ್ಬ ಇದನ್ನೆಲ್ಲ ನೋಡಿ ವಿಡಿಯೋ ಮಾಡಿದ್ದಾರೆ. ಯಾರು ನೀನು ಅಂತ ಕೂಗಿದ ಕೂಡಲೇ ಕಂಗಾಲಾಗಿ ಸಿಕ್ಕಿಬೀಳುವ ಭಯದಲ್ಲಿ ಅಷ್ಟೇ ಸಲೀಸಾಗಿ ಕೆಳಗಿಳಿದಿದ್ದಾನೆ.
ಇದೀಗ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸ್ಪೈಡರ್ ಮ್ಯಾನ್ ನಂತೆ ನಾಲ್ಕು ಅಂತಸ್ತಿನ ಕಟ್ಟಡವನ್ನು ಕೆಲವೇ ಸೆಕೆಂಡ್ ಗಳಲ್ಲಿ ಹತ್ತಿದ ಕಳ್ಳ ಕೆಲವೇ ಸೆಕೆಂಡ್ ಗಳಲ್ಲಿ ಕೆಳಗಿಳಿಯುತ್ತಾನೆ.
Verbal kalesh over thief climbing and Descending 4floor under 50seconds in West Delhi pic.twitter.com/0nLbDhRJwM
— Ghar Ke Kalesh (@gharkekalesh) May 7, 2023