DREAM | ಪ್ರೀತಿಪಾತ್ರರು ಮರಣ ಹೊಂದಿದಂಥ ಕನಸು ಬೀಳ್ತಿದ್ಯಾ? ಇದಕ್ಕೇನರ್ಥ?

ಸುಖನಿದ್ದೆಯಲ್ಲಿದ್ದಾಗ ಏಕಾಏಕಿ ಏನೇನೋ ಗೊಂದಲ, ನಿಮ್ಮ ಪ್ರೀತಿಯ ಸ್ನೇಹಿತೆ, ಅಕ್ಕ, ತಂಗಿ, ತಂದೆ, ತಾಯಿ, ಅಜ್ಜಿ, ಅಜ್ಜ, ನೆಂಟರು ಹೀಗೆ ಯಾರೋ ಸತ್ತಂತ ಕನಸು ಬೀಳುತ್ತದೆ. ಅವರಿಗೇನಾಯ್ತು ಗೊತ್ತಿಲ್ಲ, ಆದರೆ ಅವರು ಬದುಕಿಲ್ಲ ಎನ್ನುವಂಥ ಕನಸು ಬಿದ್ದು ರಪ್ ಎಂದು ಎದ್ದು ಕೂರುತ್ತೀರಿ, ಕೆನ್ನೆಯೆಲ್ಲಾ ಬೆವೆತು ಹೋಗಿರುತ್ತದೆ. ಇದಕ್ಕೇನು ಅರ್ಥ?

ಗಾಬರಿಯಾಗಬೇಡಿ, ಕನಸಿನಲ್ಲಿ ನಿಮ್ಮ ಪ್ರೀತಿಪಾತ್ರರು ಸಾಯುವುದಕ್ಕೂ, ನಿಜ ಜೀವನದಲ್ಲಿ ಹಾಗೆಯೇ ಆಗುತ್ತದೆ ಎಂದರ್ಥವಲ್ಲ. ಆದರೆ ಇದೆರಡಕ್ಕೂ ಸಂಬಂಧ ಇದ್ದೇ ಇದೆ. ನಿಮ್ಮ ಜೀವನದ ಬಹುದೊಡ್ಡ ಬದಲಾವಣೆಗಳಾಗುವ ಸಮಯದಲ್ಲಿ ಇಂಥ ಕನಸುಗಳು ಬೀಳುತ್ತವಂತೆ, ಬ್ರೇಕಪ್, ಸ್ನೇಹದಲ್ಲಿ ಬೇಸರ, ತಂದೆ ತಾಯಿಯಿಂದ ದೂರ ಹೋಗುವ ಸಂದರ್ಭ, ಕೆಲಸದಲ್ಲಿ ಬದಲಾವಣೆ ಹೀಗೆ. ಇಂಥ ಸಂದರ್ಭಗಳಲ್ಲಿ ಆತಂಕ ತುಂಬಿದ ಕನಸುಗಳು ಬೀಳುತ್ತವೆ.

ಇನ್ನು ಕೆಲವರು ಕನಸಿನಲ್ಲಿ ಸತ್ತಂತೆ ಕಾಣಸಿಗುವ ವ್ಯಕ್ತಿಗೆ ನಿಜಜೀವನದಲ್ಲಿ ಆಯಸ್ಸು ಹೆಚ್ಚಾಗುತ್ತದೆ ಎಂದೂ ಹೇಳಲಾಗುತ್ತದೆ. ಎಷ್ಟೇ ಆದ್ರೂ ಕನಸುಗಳಷ್ಟೇ ಅಲ್ವಾ? ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಸಮಾಧಾನ ಆಗದೇ ಹೋದರೆ ದೇವಸ್ಥಾನಕ್ಕೋ, ನೆಮ್ಮದಿಯ ತಾಣಕ್ಕೋ ಭೇಟಿ ನೀಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!