ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿವಿ ನಟಿ ಶ್ವೇತಾ ತಿವಾರಿ ಪುತ್ರಿ ಪಲಕ್ ತಿವಾರಿ ದೊಡ್ಡ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ಗ್ರಾಂಡ್ ಎಂಟ್ರಿ ಪಡೆದಿದ್ದು, ಪ್ರಮೋಷನ್ಸ್‌ನಲ್ಲಿ ಪಲಕ್ ಬ್ಯುಸಿಯಾಗಿದ್ದಾರೆ.
ಪ್ರಮೋಷನ್ಸ್ ವೇಳೆ ಸಲ್ಮಾನ್ ಖಾನ್ ಸೆಟ್‌ನಲ್ಲಿ ಮಹಿಳೆಯರಿಗೆ ಇರೋ ಡ್ರೆಸ್‌ಕೋಡ್ ಬಗ್ಗೆ ಪಲಕ್ ಮಾತನಾಡಿದ್ದಾರೆ. ಮಹೇಶ್ ಮಂಜ್ರೇಕರ್ ಅವರ ಅಂತಿಮ್ ಸಿನಿಮಾದಲ್ಲಿ ಪಲಕ್ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ರು. ಸಲ್ಮಾನ್ ಖಾನ್ ಈ ಸಿನಿಮಾಗೆ ದುಡ್ಡು ಹಾಕಿದ್ರು.
ಈ ವೇಳೆ ಸೆಟ್‌ನಲ್ಲಿ ಮಹಿಳೆಯರು ಡೀಪ್ ನೆಕ್ ಬಟ್ಟೆ ಹಾಕುವಂತಿಲ್ಲ. ಸಂಪೂರ್ಣ ಮೈ ಮುಚ್ಚುವಂತ ಬಟ್ಟೆ ಹಾಕಬೇಕು ಎಂದು ಸಲ್ಮಾನ್ ರೂಲ್ಸ್ ಮಾಡಿದ್ದರಂತೆ. ಈ ವಿಷಯವನ್ನು ಪಲಕ್ ಹಂಚಿಕೊಂಡಿದ್ದು, ಸಲ್ಮಾನ್ ಅವರಿಗೆ ಹೆಣ್ಣುಮಕ್ಕಳನ್ನು ಕಂಡರೆ ವಿಶೇಷ ಗೌರವವಿದೆ ಎಂದು ಹೇಳಿದ್ದಾರೆ.