WINTER CITY| ಇದು ಅತ್ಯಂತ ಶೀತ ನಗರ: ಇವರ ಉಡುಗೆ ಥೇಟ್‌ ʻಎಲೆಕೋಸುʼ ಮಾದರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಗತ್ತಿನ ಅತಿ ಶೀತ ನಗರ ಯಾವುದು ಗೊತ್ತಾ.. ಯಾಕುಸ್ಕ್. ಈ ನಗರವು ರಷ್ಯಾದ ಮಾಸ್ಕೋದಿಂದ ಉತ್ತರಕ್ಕೆ 5,000 ಕಿಲೋಮೀಟರ್ ದೂರದಲ್ಲಿದೆ. ಇದು ಸೈಬೀರಿಯಾದ ನಗರ. ಇದರರ್ಥ ರಷ್ಯಾದ ಅವಿಭಾಜ್ಯ ಅಂಗವಾಗಿರುವ ಪ್ರದೇಶ.

ಯಾಕುಸ್ಕ್‌ನಲ್ಲಿ ಚಳಿಗಾಲವು ಸಾಮಾನ್ಯವಾಗಿ ಮೈನಸ್ 40 ಡಿಗ್ರಿ ತಾಪಮಾನವನ್ನು ನೋಡುತ್ತದೆ. ಆದರೆ ಈಗ ತಾಪಮಾನ ಮೈನಸ್ 50 ಡಿಗ್ರಿ ಇದೆ. ಆದರೆ, ಇಷ್ಟೊಂದು ಕಡಿಮೆ ತಾಪಮಾನದ ನಡುವೆಯೂ ಅಲ್ಲಿನ ಜನರು ಹೆಚ್ಚಿನ ಆತಂಕಕ್ಕೆ ಒಳಗಾಗಿಲ್ಲ. ಏಕೆಂದರೆ ಜನರು ಈ ತಾಪಮಾನಕ್ಕೆ ಸರಿಹೊಂದುವ ಉಡುಗೆ ಬಳಸುತ್ತಾರೆ.

ಎರಡು ಶಾಲುಗಳು ಮತ್ತು ಎರಡು ಕೈಗವಸುಗಳನ್ನು ಧರಿಸಲಾಗುತ್ತದೆ. ಅವರು ಟೋಪಿಗಳು ಮತ್ತು ಹೂಡಿಗಳನ್ನು ಧರಿಸಿ ನಡೆದಾಡುವ ಎಲೆಕೋಸಿನಂತೆ ಕಾಣುತ್ತಾರೆ. ಚಳಿಯನ್ನು ತಡೆದುಕೊಳ್ಳಲು ಮೆದುಳು ಮೊದಲೇ ಸಿದ್ಧಗೊಂಡಿದೆ. ಆದರೆ, ಇಲ್ಲಿ ಚಳಿಯ ವಿರುದ್ಧ ಹೋರಾಡಬೇಕಿಲ್ಲ… ಚಳಿಗೆ ಹೊಂದಿಕೊಳ್ಳುವುದನ್ನು ಕಲಿಯಬೇಕು’ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ಮೀನು ಮತ್ತು ಆಹಾರವನ್ನು ಸಂಗ್ರಹಿಸಲು ಯಾವುದೇ ವಿಶೇಷ ಫ್ರೀಜರ್ ಅಥವಾ ಫ್ರಿಜ್ ಅಗತ್ಯವಿಲ್ಲ.

ನೈಸರ್ಗಿಕವಾಗಿ, ಈ ಮಂಜುಗಡ್ಡೆಯಲ್ಲಿ ಆಹಾರವು ಹಾಳಾಗುವುದಿಲ್ಲ. ಇಲ್ಲಿ ವಾಸ ಮಾಡಬೇಕಾದರೆ ಸರಿಯಾಗಿ ಡ್ರೆಸ್ ಹಾಕಿಕೊಂಡರೆ ಸಾಕು.. ಅದೂ ಕೂಡ ಎಲೆಕೋಸಿನಂತೆ ಹಲವು ಪದರಗಳಲ್ಲಿ ಡ್ರೆಸ್ ಮಾಡಿದರೆ ಒಳಿತು ಎನ್ನುತ್ತಾರೆ ಸ್ಥಳೀಯರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!