ಬೆಳಗ್ಗೆ ತಿಂಡಿಗೆ ಮುನ್ನ ಅಥವಾ ತಿಂಡಿಯ ಜೊತೆ ರಾಗಿ ಗಂಜಿ ಸೇವಿಸಿ ಯಾಕೆ ಗೊತ್ತಾ?
ಇದು ಪೊಟ್ಯಾಸಿಯಮ್ ಮತ್ತು ಕಬ್ಬಿಣದಿಂದಲೂ ಸಮೃದ್ಧವಾಗಿದೆ. ಮೂಳೆ ಸಾಂದ್ರತೆ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ಕ್ಯಾಲ್ಸಿಯಂ ಸಹಜವಾಗಿ ಪ್ರಮುಖ ಅಂಶವಾಗಿದೆ. ಹೀಗಾಗಿ, ರಾಗಿ ಪ್ರತ್ಯಕ್ಷವಾದ ಪೂರಕಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ, ವಿಶೇಷವಾಗಿ ಆಸ್ಟಿಯೊಪೊರೋಸಿಸ್ ಅಥವಾ ಕಡಿಮೆ ಹಿಮೋಗ್ಲೋಬಿನ್ ಮಟ್ಟಗಳ ಅಪಾಯದಲ್ಲಿರುವ ಜನರಿಗೆ ಇದು ಸಹಕಾರಿ.
ರಾಗಿ ಗಂಜಿ ಹೇಗೆ ಮಾಡೋದು?
ಒಂದು ಲೋಟ ನೀರಿಗೆ ಒಂದು ದೊಡ್ಡ ಸ್ಪೂನ್ ರಾಗಿಹಿಟ್ಟಿನ ಲೆಕ್ಕದಂತೆ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಇದನ್ನು ಹತ್ತು ನಿಮಿಷ ಕುದಿಸಿ ಉಪ್ಪು, ಮೊಸರು ಬೇಕಿದ್ದು ಹಾಕಿ ಕುಡಿಯಿರಿ