ಅನಾನಸ್ ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಬೇಡದ ಕೊಬ್ಬನ್ನು ಹೊರಹಾಕುತ್ತದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಇದು ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ.
ಈ ರೀತಿಯ ಆಹಾರವು ನಿಮ್ಮ ಹೊಟ್ಟೆಯನ್ನು ತುಂಬುತ್ತದೆ. ನೀವು ಆಗಾಗ್ಗೆ ತಿನ್ನಬೇಕು ಎಂದು ನಿಮಗೆ ಅನಿಸುವುದಿಲ್ಲ. ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಇದು ಮುಖ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ಈ ಹಣ್ಣು ಡಯೆಟ್ ಮಾಡುವ ಜನರಿಗೆ ವಿಶೇಷವಾಗಿ ಸೂಕ್ತವಾಗಿದೆ. ಊಟಕ್ಕೆ ಒಂದು ಗಂಟೆ ಮೊದಲು ಇದನ್ನು ಸೇವಿಸಿ. ಅಥವಾ ಊಟವಾದ 2 ಗಂಟೆಗಳ ನಂತರ ತೆಗೆದುಕೊಂಡರೆ, ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಇದನ್ನು ಜ್ಯೂಸ್, ಸಲಾಡ್ ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಬಹುದು.