ಪೇಪರ್ ಕಪ್‌ಗಳಲ್ಲಿ ಚಹಾ ಕುಡಿಯುತ್ತಿದ್ದೀರಾ? ಹಾಗಿದ್ರೆ ಮೊದಲು ಇದನ್ನು ಓದಿಬಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾವೆಲ್ಲರೂ ಪ್ರತಿದಿನ ಕಾಫಿ ಅಥವಾ ಟೀ ಕುಡಿಯಲು ಇಷ್ಟಪಡುತ್ತೇವೆ. ಪ್ರಯಾಣ ಮಾಡುವಾಗ ಮತ್ತು ಕೆಲಸ ಮಾಡುವಾಗ ಚಹಾ, ಕಾಫಿ ಕುಡಿಯುವವರು ಅನೇಕರಿದ್ದಾರೆ. ಟೀ, ಕಾಫಿ ಕುಡಿಯಲು ಪೇಪರ್ ಕಪ್, ಗ್ಲಾಸ್ ಗಳು ಬಂದ ಮೇಲೆ ಕುಡಿಯುವುದೂ ಸುಲಭವಾಯಿತು. ಆದಾಗ್ಯೂ, ಕೆಲವು ವಿಜ್ಞಾನಿಗಳು ಈ ಕಪ್ಗಳು ನಮ್ಮ ಆರೋಗ್ಯಕ್ಕೆ ವಿಪತ್ತು ಎಂದು ಸ್ಪಷ್ಟಪಡಿಸುತ್ತಾರೆ.

ಪೇಪರ್ ಕಪ್‌ಗಳು ಸೋರಿಕೆ-ನಿರೋಧಕ ಪದರವಾಗಿ ಮೈಕ್ರೋಪ್ಲಾಸ್ಟಿಕ್ ಲೇಪನವನ್ನು ಹೊಂದಿರುತ್ತವೆ. ಪೇಪರ್ ಕಪ್ ಮೃದುವಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಟೀ, ಕಾಫಿಯನ್ನು ಕೆಲವೇ ನಿಮಿಷಗಳಲ್ಲಿ ಸೇವಿಸಿ, ತೊಳೆಯದೆ ಕಸದ ಬುಟ್ಟಿಗೆ ಹಾಕುವುದು ಸುಲಭ ಎಂಬ ಕಾರಣಕ್ಕೆ ಪೇಪರ್ ಪ್ಲೇಟ್, ಲೋಟಗಳನ್ನು ವ್ಯಾಪಕವಾಗಿ ಬಳಸುವುದು ಅಭ್ಯಾಸವಾಗಿಬಿಟ್ಟಿದೆ.

ಆದಾಗ್ಯೂ, ವಿಜ್ಞಾನಿಗಳು ಈ ಪೇಪರ್ ಕಪ್‌ಗಳ ಮೇಲೆ ನಡೆಸಿದ ಸಂಶೋಧನೆಯು ಎಲ್ಲರನ್ನೂ ವಿಚಲಿತಗೊಳಿಸುವ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಪೇಪರ್, ಗ್ಲಾಸ್, ಕಪ್ ಗಳಲ್ಲಿ ಬಿಸಿ ದ್ರವ ತುಂಬಿದಾಗ ಅದರ ಮೇಲಿರುವ ಮೈಕ್ರೋ ಪ್ಲಾಸ್ಟಿಕ್ ಲೇಪನ ಕೇವಲ 15 ನಿಮಿಷದಲ್ಲಿ ಕರಗಿ ನಮಗೆ ಸೇವಿಸಲು ಸಿದ್ಧವಾಗಿರುವ ದ್ರವ ಪದಾರ್ಥಗಳೊಂದಿಗೆ ಬೆರೆತಿರುವುದು ದೃಢಪಟ್ಟಿದೆ. ಹೆವಿ ಮೆಟಲ್ಸ್ ಮಿಶ್ರಿತ ಪ್ಲಾಸ್ಟಿಕ್ ಅಯಾನುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಸತು, ಮ್ಯಾಂಗನೀಸ್, ನಿಕಲ್, ತಾಮ್ರ, ಸೀಸ, ಕ್ಯಾಡ್ಮಿಯಮ್, ಕ್ರೋಮಿಯಂ, ಪಲ್ಲಾಡಿಯಮ್ ಮುಂತಾದ ಭಾರವಾದ ಲೋಹಗಳು ಪ್ಲಾಸ್ಟಿಕ್ ಅಯಾನುಗಳೊಂದಿಗೆ ಕಾಗದದ ಕಪ್ಗಳು ಮತ್ತು ಗ್ಲಾಸ್ಗಳ ಮೇಲಿನ ಪದರದಲ್ಲಿ ಕಂಡುಬಂದಿವೆ. ಈ ಬಿಸಿ ದ್ರವಗಳನ್ನು ಸೇವಿಸಿದರೆ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ವಿಶೇಷವಾಗಿ ನರಗಳಿಗೆ ಸಂಬಂಧಿಸಿದ ಪಾರ್ಶ್ವವಾಯು, ಬ್ರೈನ್ ಸ್ಟ್ರೋಕ್ ಮತ್ತು ಬಂಜೆತನದಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಒಬ್ಬ ಪೇಪರ್ ಕಪ್‌ನಲ್ಲಿ ದಿನಕ್ಕೆ ಮೂರು ಕಪ್ ಚಹಾ ಅಥವಾ ಕಾಫಿ ಕುಡಿಯುವ ಒಬ್ಬ ವ್ಯಕ್ತಿಯು ಕಣ್ಣಿಗೆ ಕಾಣದ 75,000 ಸಣ್ಣ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಖರಗ್‌ಪುರ ಇಂಡಿಯನ್ ಇನ್‌ಸ್ಟಿಟ್ಯೂಟ್‌ನ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಡಾ.ಸುಧಾ ಗೋಯೆಲ್ ಹೇಳಿದ್ದಾರೆ. ಗಾತ್ರದಲ್ಲಿ ಚಿಕ್ಕದಾದ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ನರಗಳು ಮತ್ತು ರಕ್ತದ ಮೂಲಕ ಚಲಿಸಬಹುದು ಮತ್ತು ದೇಹದ ಭಾಗಗಳನ್ನು ತಲುಪಬಹುದು. ನರಮಂಡಲವನ್ನು ಗಂಭೀರವಾಗಿ ಹಾನಿಗೊಳಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!