ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ಆಚರಣೆಯೂ ಸಿಹಿಯಿಲ್ಲದೆ ಸಂಪೂರ್ಣವಾಗುವುದಿಲ್ಲ. ಸಿಹಿ ಪದಾರ್ಥ ಇಷ್ಟವಿಲ್ಲದ ಜನರಿರುವುದು ತೀರಾ ವಿರಳ ಅದರಲ್ಲೂ ಮಕ್ಕಳಿಗೆ ಸಿಹಿ ಇದ್ದರೆ ಬೇರೇನೂ ಬೇಡ. ಆದರೆ, ಸಿಹಿ ತಿಂದ ಬಳಿಕ ನೀರು ಕುಡಿಯುವುದ ಆರೋಗ್ಯಕ್ಕೆ ಒಳ್ಳೆಯದಲ್ಲಿ ಅಂತಾರೆ..ಹಾಗಾದ್ರೆ ಸಿಹಿ ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಎಂದು ತಿಳಿಯೋಣ.
ಸಿಹಿ ತಿಂದ ನಂತರ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಏರುತ್ತದೆಯಂತೆ. ಸಾಮಾನ್ಯವಾಗಿಯೇ ನಾವು ಸಿಹಿತಿಂಡಿಗಳನ್ನು ತಿಂದ ನಂತರ, ಸಕ್ಕರೆಯ ಪ್ರಮಾಣವು ಸ್ವಯಂಚಾಲಿತವಾಗಿ ವೇಗವಾಗಿ ಹೆಚ್ಚಾಗುತ್ತದೆ.
ಮಧುಮೇಹಿಗಳು ಸಿಹಿತಿಂಡಿಗಳನ್ನು ಸೇವಿಸಿದ ನಂತರ ಯಾವುದೇ ಕಾರಣಕ್ಕೂ ನೀರನ್ನು ಕುಡಿಯದಂತೆ ತಜ್ಞರು ಹೇಳುತ್ತಾರೆ. ಸಿಹಿ ಪದಾರ್ಥ ತಿಂದ ನಂತರ ನೀರು ಕುಡಿಯಲು ಬಯಸಿದರೆ, ನಿಮ್ಮ ಬಾಯಿಯಲ್ಲಿ ನೀರು ಕುಡಿದು ಮುಕ್ಕಳಿಸಿ ಉಗಿಯಿರಿ. ದೇಹಕ್ಕೆ ಯಾವುದೇ ಹಾನಿಯಾಗದಂತೆ ಪದಾರ್ಥಗಳನ್ನು ತಿಂದ ಅರ್ಧ ಗಂಟೆ ನಂತರವೇ ನೀರು ಕುಡಿಯಬೇಕು.