ಬೇಕಾಗುವ ಸಾಮಗ್ರಿಗಳು:
ಗಟ್ಟಿ ಮೊಸರು
ರೋಸ್ ಸಿರಪ್
ಸಕ್ಕರೆ
ಏಲಕ್ಕಿ ಪುಡಿ:
ಐಸ್ ಕ್ಯೂಬ್ಸ್
ಬಾದಾಮಿ-ಪಿಸ್ತಾ
ಮಾಡುವ ವಿಧಾನ:
ಒಂದು ಮಿಕ್ಸಿ ಜಾರ್‌ಗೆ ತಣ್ಣಗಿನ ಗಟ್ಟಿ ಮೊಸರು, ರೋಸ್ ಸಿರಪ್, ಸಕ್ಕರೆ, ಏಲಕ್ಕಿ ಪುಡಿ ಮತ್ತು ಐಸ್ ಕ್ಯೂಬ್ಸ್ ಹಾಕಿ. ಎಲ್ಲವನ್ನೂ 1 ನಿಮಿಷಗಳ ಕಾಲ ನಯವಾಗಿ ಬ್ಲೆಂಡ್ ಮಾಡಿ. ಈಗ ತಂಪಾದ ಲಸ್ಸಿಯನ್ನು ಗ್ಲಾಸ್‌ಗೆ ಹಾಕಿ. ಮೇಲೆ ಬಾದಾಮಿ, ಪಿಸ್ತಾ ಚೂರುಗಳು ಮತ್ತು ಗುಲಾಬಿ ಎಸಳುಗಳಿಂದ ಅಲಂಕರಿಸಿದರೆ, ರಿಫ್ರೆಷಿಂಗ್ ‘ಗುಲಾಬ್ ಲಸ್ಸಿ’ ಸವಿಯಲು ಸಿದ್ಧ!



