ಚೆನ್ನೈಗೆ ಬಂದು ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈ ಬಂದರಿಗೆ ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮೆಟ್ರೋ ರೈಲು (Driverless Yellow Metro Train) ಚೀನಾದಿಂದ (China) ಹೊರಟು ಬಂದು ತಲುಪಿದೆ.

ಮಂಗಳವಾರ ಬೆಳಗ್ಗೆ ಬೋಗಿಗಳು ಚೆನ್ನೈ ಬಂದರಿಗೆ ಆಗಮಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಈ ಬೋಗಿಗಳನ್ನು ಚೀನಾದಿಂದ ತರಿಸಲಾಗಿದೆ.

ಚೆನ್ನೈ ಬಂದರಿನಲ್ಲಿ ಕಾರ್ಗೋ ಶಿಪ್‌ನಿಂದ (Cargo Ship) ಬೋಗಿಗಳನ್ನು ಅನ್‌ಲೋಡ್ ಮಾಡಲಾಗಿದೆ. ಇದಾದ ಬಳಿಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರೈಲು ಆಗಮಿಸಲಿದೆ.

ಚೀನಾದಿಂದ ರವಾನೆಯಾದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿಗೆ ಆಗಮಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಖಚಿತಪಡಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಈ ಬೋಗಿಗಳನ್ನು ರಸ್ತೆ ಮೂಲಕ ಬೆಂಗಳೂರಿಗೆ (Bengaluru) ಸಾಗಿಸಲಾಗುತ್ತದೆ. ಕಸ್ಟಮ್ ಕ್ಲಿಯರೆನ್ಸ್ ಸುಮಾರು 5 ದಿನಗಳನ್ನು ತೆಗೆದುಕೊಳ್ಳಬಹುದು. ಫೆಬ್ರವರಿ 18ರ ಒಳಗೆ ರೈಲು ಬೆಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ತಿಳಿಸಿದ್ದಾರೆ.

ಹೆಬ್ಬಗೋಡಿಗೆ ತಲುಪಿದ ಬಳಿಕ ಟ್ರ್ಯಾಕ್‌ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ. ಇದಾದ ಬಳಿಕ ಟ್ರ್ಯಾಕ್‌ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ. ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!