ಶ್ರೀರಂಗಪಟ್ಟಣ ದಸರಾಗೆ ಚಾಲನೆ.. ಪೂಜೆ ಸಮಯದಲ್ಲಿ ಅಡ್ಡಾದಿಡ್ಡಿ ಓಡಾಡಿದ ‘ಹಿರಣ್ಯ’

ಹೊಸದಿಗಂತ ಶ್ರೀರಂಗಪಟ್ಟಣ :

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ದಸರಾಗೆ ಚಾಲನೆ ನೀಡಲು ಹಿರಣ್ಯ ಎಂಬ ಆನೆಯನ್ನು ಕರೆತರಲಾಗಿದ್ದು, ಪೂಜೆ ಸಮಯದಲ್ಲಿ ಅಡ್ಡಾದಿಡ್ಡಿ ಓಡಾಡುವ ಮೂಲಕ ಆತಂಕದ ವಾತಾವರಣ ಉಂಟುಮಾಡಿತ್ತು.

ದೇವಾಲಯದ ಆವರಣದಲ್ಲಿದ್ದ ಬಿಳಿ ಕುದುರೆಯನ್ನು ನೋಡಿ ಬೆದರಿದ ಹಿರಣ್ಯ ಎಂಬ ಹೆಸರಿನ ಆನೆಯು ಕೆಲ ಕಾಲ ಆತಂಕ ಉಂಟು ಮಾಡಿತ್ತು. ತಕ್ಷಣ ಎಚ್ಚೆತ್ತ ಮಾವುತ ಆನೆಯನ್ನು ಸಮಾಧಾನಪಡಿಸಿ ನಿಯಂತ್ರಣಕ್ಕೆ ತರುವಲ್ಲಿ ಹರಸಾಹಸಪಟ್ಟರು. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳೂ ಸಹ ಕೈಜೋಡಿಸಿದರು. ಆನೆಯ ಬೆನ್ನು ಸವರುವ ಮೂಲಕ ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಬೆದರಿದ ಆನೆಯು ಅಂಗಡಿ ಮುಂಗಟ್ಟುಗಳ ಸುತ್ತ ಓಡಾಡಿತು. ಸ್ಥಳದಲ್ಲಿದ್ದ ದ್ವಿಚಕ್ರ ವಾಹನ ಸವಾರರು ಸ್ಥಳದಿಂದ ಕಾಲ್ಕಿತ್ತರೆ ಉಳಿದವರು ಚೆಲ್ಲಾಪಿಲ್ಲಿಯಾಗಿ ಓಡಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!