ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಡ್ರೋನ್ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಯಾವುದೇ ಸಾವು-ನೋವುಗಳ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಮತ್ತು ಕಡಲ ಭದ್ರತಾ ಸಂಸ್ಥೆ ಅಂಬ್ರೆ ಪ್ರಕಾರ, ಭಾರತದ ಕರಾವಳಿ ಭಾಗದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಿಂದ ಹಡುಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ. ಇದು ಇಸ್ರೇಲ್​ನ ಲೈಬೀರಿಯಾ-ಫ್ಲಾಗ್ಡ್ ರಾಸಾಯನಿಕ/ಉತ್ಪನ್ನಗಳ ಟ್ಯಾಂಕರ್​​​​ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಎಂದು ಹೇಳಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಭಾರತೀಯ ಕರಾವಳಿ ಕಾವಲು ಪಡೆ ಸಹಾಯಕ್ಕೆ ಧಾವಿಸಿದೆ. ‘ಭಾರತೀಯ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್ ಡ್ರೋನ್ ದಾಳಿಯಿಂದ ಉಂಟಾದ ಬೆಂಕಿಯ ಕುರಿತು ವರದಿ ಬಂದ ಬೆನ್ನಲ್ಲಿಯೇ ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲು ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಎಂವಿ ಕೆಮ್ ಪ್ಲುಟೊ ಎಂಬ ವ್ಯಾಪಾರಿ ಹಡಗು ಕಡೆಗೆ ಪ್ರಯಾಣ ಮಾಡುತ್ತಿದೆ. ಹಡಗಿನಲ್ಲಿ ಕಚ್ಚಾ ತೈಲವಿದ್ದು, ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತಿಗೆ ನಿಯೋಜಿಸಲಾಗಿತ್ತು. ಈಗ ಅದು ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ತನ್ನ ಪ್ರಯಾಣ ನಡೆಸಿದೆ. ಸುಮಾರು 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಐಸಿಜಿಎಸ್ ವಿಕ್ರಮ್ ಪ್ರದೇಶದಲ್ಲಿರುವ ಎಲ್ಲಾ ಹಡಗುಗಳಿಗೆ ನೆರವು ನೀಡಲು ಸೂಚನೆ ನೀಡಲಾಗಿದೆ’ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನ ವೆರಾವಲ್‌ನಿಂದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.

ಈ ದಾಳಿಗೆ ಭಾರತೀಯ ನೌಕಾಪಡೆ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಲಾಗಿದೆ. ಇನ್ನು ದಾಳಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಇಸ್ರೇಲ್​ಗೂ ವರದಿ ಮಾಡಲಾಗಿದೆ. ಇನ್ನು ಈ ದಾಳಿ ಎಲ್ಲಿಂದ ನಡೆದಿದೆ ? ಯಾರು ನಡೆಸಿದ್ದಾರೆ ಎಂದು ತಿಳಿದು ಬಂದಿಲ್ಲ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!