September 30, 2026
Wednesday, September 30, 2026
spot_img

ಬೆಂಗಳೂರು ಏರ್‌ಪೋರ್ಟ್ ನಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ FIR

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿಯಮ ಬಾಹಿರವಾಗಿ ಡ್ರೋನ್ ಹಾರಿಸಿದ ಯೂಟ್ಯೂಬರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಬೆಂಗಳೂರು ವಾಂಟರ್‍ಲಸ್ಟ್ ಎಂಬ ಯೂಟ್ಯೂಬರ್ ಏರ್ ಪೋರ್ಟ್‍ನ ಟರ್ಮಿನಲ್ 1ರ ಮುಂಭಾಗದಿಂದ ಬೆಂಗಳೂರಿನ ಯಲಹಂಕ ಮಾರ್ಗವಾಗಿ ಏರ್ ಪೋರ್ಸ್‍ವರೆಗೂ ಡ್ರೋನ್ ಹಾರಿಸಲಾಗಿದೆ. ಸುಮಾರು 7-8 ನಿಮಿಷಗಳ ಕಾಲ ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ.

ವಿಮಾನ ನಿಲ್ದಾಣದ ರೆಡ್ ಝೋನ್, ನೋ ಫ್ಲೇಯಿಂಗ್ ಝೋನ್ ನಲ್ಲಿ ಡ್ರೋನ್ ಹಾರಾಟ ಮಾಡಿದ ಯೂಟ್ಯೂಬರ್ ವಿರುದ್ಧ ಸಿಐಎಸ್ಎಫ್ ನ ಭದ್ರತಾ ಸಿಬ್ಬಂದಿಗಳ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

Must Read