ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನ ಊಟ ಮಾಡದೇ ಆಸ್ಪತ್ರೆ ಸೇರಿದ್ದ ಡ್ರೋನ್ ಪ್ರತಾಪ್ ( Drone pratap) ಇದೀಗ ಮತ್ತೆ ಬಿಗ್‌ಬಾಸ್ ( Big boss) ಮನೆಗೆ ವಾಪಾಸಾಗಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಊಹಾಪೋಹದ ಮಧ್ಯೆ ವೈದ್ಯರು ಇದು ಫುಡ್‌ಪಾಯಿಸನಿಂಗ್ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ವಾರವೂ ಪ್ರತಾಪ್ ನಾಮಿನೇಟ್ ಆಗಿದ್ದಾರೆ, ಮನೆಗೆ ಬಂದ ತಕ್ಷಣ ಯಾರೊಂದಿಗೂ ಸರಿಯಾಗಿ ಮಾತನಾಡದೆ ಮೌನಕ್ಕೆ ಜಾರಿದ್ದಾರೆ. ಕೆಲವು ಜಗಳಗಳಿಂದಾಗಿ ಪ್ರತಾಪ್ ಡಲ್ ಆಗಿದ್ದು, ಇದೀಗ ಮತ್ತೆ ಎನರ್ಜಿಟಿಕ್ ಆಗಿ ಆಟ ಆಡ್ತಾರಾ ಇಲ್ವಾ? ಕಾದುನೋಡಬೇಕಿದೆ.