ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಮಲಪ್ರಭಾ ಜಲಾಶಯದಿಂದ ನೀರು ಬಿಡಲು ಸಹಲಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಯ 14 ತಾಲೂಕುಗಳಿಗೆ ನಾಳೆಯಿಂದ 15ದಿನಗಳ ಕಾಲ ನೀರು ಬಿಡಲು ತೀರ್ಮಾನ ಮಾಡಲಾಗಿದೆ.
ಸೆ.22 ರಿಂದ ಮುಂದಿನ 15 ದಿನಗಳು ನೀರು ಬಿಡಲಾಗುವುದು, ಕುಡಿಯುವ ನೀರಿನ ಸಮಸ್ಯೆ ಎದುರಾದ ಕಾರಣ ತುರ್ತು ಸಭೆ ಕರೆಯಲಾಗಿದೆ. ಮಲಪ್ರಭಾ ಜಲಾಶಯ 37 ಟಿಸಿಎಂ ಸಾಮರ್ಥ್ಯ ಹೊಂದಿದೆ, ಇದೀಗ 21 ಟಿಸಿಎಂ ನೀರು ಮಾತ್ರ ಇದೆ. ದಿನವೂ ಒಂದೂವರೆ ಟಿಸಿಎಂ ನೀರನ್ನು ಬಿಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.