ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಸೆಲೆಬ್ರಿಟಿಗಳು, ನಟರು ಮತ್ತು ಹೆಸರಾಂತ ವ್ಯಕ್ತಿಗಳು ಚುನಾವಣಾ ಪ್ರಚಾರಕರಾಗಿ ಆಯ್ಕೆಯಾಗುತ್ತಾರೆ. ಆದರೆ, ಮೊದಲ ಬಾರಿಗೆ ಚುನಾವಣಾ ಪ್ರಚಾರಕರಾಗಿ ತೃತೀಯಲಿಂಗಿಯೊಬ್ಬರನ್ನು ಚುನಾವಣಾ ಆಯೋಗ ನೇಮಿಸಿದೆ. ತೆಲಂಗಾಣ ರಾಜ್ಯ ಚುನಾವಣಾ ಪ್ರಚಾರಕಿಯಾಗಿ ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ ಲೈಲಾ ಅವರನ್ನು ನೇಮಿಸಲಾಗಿದೆ. ವರಂಗಲ್ ನಗರದ 33 ನೇ ವಿಭಾಗದ ಎಸ್‌ಆರ್‌ಆರ್ ತೋಟದ ಪ್ರದೇಶದಿಂದ ಟ್ರಾನ್ಸ್‌ಜೆಂಡರ್ ಲೈಲಾ ಅವರನ್ನು ಆಯ್ಕೆ ಮಾಡಿದೆ.
ವರಂಗಲ್ ಜಿಲ್ಲೆಯಲ್ಲಿ ಲೈಲಾ 3,600ಕ್ಕೂ ಹೆಚ್ಚು ಟ್ರಾನ್ಸ್‌ಜೆಂಡರ್‌ಗಳ ನಾಯಕತ್ವವನ್ನು ವಹಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ, ವ್ಯವಸ್ಥೆ ಮತ್ತಿತರ ವಿಷಯಗಳತ್ತ ಚುನಾವಣಾಧಿಕಾರಿಗಳು ಗಮನಹರಿಸಿದರು. ಇದರ ಅಂಗವಾಗಿ ಚುನಾವಣಾ ಆಯೋಗವು ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಚುನಾವಣಾ ಪ್ರಚಾರದ ಆಯ್ಕೆಯ ಭಾಗವಾಗಿ, ಈ ಬಾರಿ ವರಂಗಲ್‌ನ ಟ್ರಾನ್ಸ್‌ಜೆಂಡರ್ ಲೈಲಾ ಅವರನ್ನು ತೆಲಂಗಾಣ ಚುನಾವಣಾ ಪ್ರಚಾರಕರಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಬಹಿರಂಗಪಡಿಸಿದೆ.