ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ 63 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಹ ಆಕೆಯೊಂದಿಗೆ ಕೈಜೋಡಿಸಿದ್ದಾರೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬಂಧನದ ವೇಳೆ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಸುಮಾರು ಎಂಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ದೊರೆತ ಮಾಹಿತಿ ಆಧಾರದ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಮಾದಕ ವಸ್ತು ಮಾರಾಟಗಾರ್ತಿ ಕಾಲಿ ಮೆಹರುನಿಸಾ ಅವರ ಒಡೆತನದ ಹಲವು ಮನೆಗಳ ಪೈಕಿ ಒಂದರ ಮೇಲೆ ದಾಳಿ ನಡೆಸಿದ್ದಾರೆ.
ಅಲ್ಲಿ 40 ಕೆಜಿ ಗಾಂಜಾ ಪತ್ತೆಯಾಗಿದೆ. ಮೆಹ್ರುನಿಸಾ ಅವರ ಸಂಬಂಧಿ ಮತ್ತು ಇನ್ನೊಬ್ಬ ಬಾಡಿಗೆದಾರರಿಗೆ ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು, ಅವರನ್ನು ಬಂಧಿಸಿದ ನಂತರ ಪೊಲೀಸರಿಗೆ ಆಕೆಯ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾರೆ.
ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆ ಎಂದು ತಿಳಿದ ನಂತರ, ಮೆಹರುನಿಸಾ ಬೆಂಗಳೂರಿನಿಂದ ಓಡಿಹೋಗಿದ್ದರು. ಮೊದಲು ಗುಜರಾತ್‌ಗೆ ಹೋಗಿ, ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದಳು. ಅಲ್ಲಿಯೇ ಆಕೆಯನ್ನು ಬಂಧಿಸಲಾಗಿದೆ. ಗುರುವಾರ ಸಂಜೆ ಪೊಲೀಸರು ಆಕೆಯನ್ನು ಬಂಧಿಸಿದ್ದು, ನಂತರ ಬೆಂಗಳೂರಿಗೆ ಕರೆತಂದು ಬ್ಯಾಟರಾಯನಪುರದಲ್ಲಿರುವ ಆಕೆಯ ಮನೆಯನ್ನು ಶೋಧಿಸಲು ನ್ಯಾಯಾಲಯದ ಅನುಮತಿ ಕೋರಿದ್ದರು. ಅಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ 33 ಲಕ್ಷ ರೂ. ನಗದು ಮತ್ತು ಎಂಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.