ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಮುಖ ಔಷಧ ತಯಾರಿಕಾ ಕಂಪನಿಯಾದ ಸಿಪ್ಲಾ ಡಿಸೆಂಬರ್ 2022ರಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದ ಲಾಭದಲ್ಲಿ 7 ಶೇಕಡಾ ಜಿಗಿತವನ್ನು ದಾಖಲಿಸಿದ್ದು 808 ಕೋಟಿ ರೂಪಾಯಿ ಲಾಭ ಗಳಿಸಿರುವುದಾಗಿ ಹೇಳಿಕೊಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಿಪ್ಲಾವು 757 ಕೋಟಿ ರೂ. ನಿವ್ವಳ ಲಾಭವನ್ನು ವರದಿ ಮಾಡಿತ್ತು ಎಂದು ಬಿಸಿನೆಸ್ ಇನ್‌ಸೈಡರ್ ವರದಿ ಮಾಡಿದೆ.
2022ರಲ್ಲಿನ ದೃಢವಾದ ಮಾರಾಟವು ಸಿಪ್ಲಾದ ಲಾಭಕ್ಕೆ ಕೊಡುಗೆ ನೀಡಿದೆ. ಕಾರ್ಯಾಚರಣೆಯಿಂದ ಅದರ ಒಟ್ಟು ಆದಾಯವು 2021ರ ಇದೇ ಅವಧಿಯಲ್ಲಿನ 5,479 ಕೋಟಿ ರೂ.ಗೆ ಹೋಲಿಸಿದರೆ 2022ರ ಮೂರನೇ ತ್ರೈಮಾಸಿಕದಲ್ಲಿ 5,810 ಕೋಟಿ ರೂ.ಗೆ ಏರಿಕೆಯಾಗಿದೆ.
ಡಿಸೆಂಬರ್ 31, 2022 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ, 2,311 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ. ಕಂಪನಿಯು ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 2,176 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ವರದಿ ಮಾಡಿತ್ತು.