ಪಂಜಾಬ್‌ ಸೆಕ್ಟರ್‌ನಲ್ಲಿ ಡ್ರಗ್ಸ್, ಶಸ್ತ್ರಾಸ್ತ್ರಗಳ ಹಾವಳಿ: ಬಿಎಸ್‌ಎಫ್‌ ಸಿಬ್ಬಂದಿಯಿಂದ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳು ಕೋಲಾಹಲ ಸೃಷ್ಟಿಸಿವೆ. ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ಪಿಸ್ತೂಲ್‌ ಇತರ ಸ್ಫೋಟಕಗಳು ಮತ್ತು ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ಗಡಿ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಗುರುದಾಸ್‌ಪುರ ವಲಯದಲ್ಲಿ ಅನುಮಾನಾಸ್ಪದ ಚಲನವಲನಗಳ ಕುರಿತು ವಿಶೇಷ ತಪಾಸಣೆ ನಡೆಸಿದಾಗ ಕಳ್ಳಸಾಗಾಣಿಕೆದಾರರ ದಂಧೆ ಬಯಲಾಗಿದೆ.

ಬಿಎಸ್‌ಎಫ್ ಪಡೆಗಳು 20 ಹೆರಾಯಿನ್ ಪ್ಯಾಕೆಟ್‌ಗಳು, ಒಂದು ಚೀನಾ ನಿರ್ಮಿತ ಪಿಸ್ತೂಲ್, ಒಂದು ಟರ್ಕಿಶ್ ನಿರ್ಮಿತ ‌ಪಿಸ್ತೂಲ್, 6 ಮ್ಯಾಗಜೀನ್‌ಗಳು, 242 ರೌಂಡ್‌ಗಳ ಬುಲೆಟ್‌ಗಳು ಮತ್ತು 12 ಅಡಿ ಪ್ಲಾಸ್ಟಿಕ್ ಪೈಪ್ ಅನ್ನು ವಶಪಡಿಸಿಕೊಂಡಿವೆ.

ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸುತ್ತಿದ್ದಂತೆ ಕಳ್ಳಸಾಗಣೆದಾರರು ಪರಾರಿಯಾಗಿದ್ದಾರೆ. ಮಂಜಿನ ನೆರವಿನೊಂದಿಗೆ ಬಂದೂಕುಧಾರಿಗಳು ಈಗಲೂ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!