ಕೇರಳದಲ್ಲಿ ಸಿಕ್ಕಿದ್ದು ಬರೋಬ್ಬರಿ 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್, ದೇಶದಲ್ಲಿ ಇದೇ ಮೊದಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ನೌಕಾಪಡೆ ಹಾಗೂ ಮಾದಕವಸ್ತು ನಿಗ್ರಹದಳ ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಂದರಿಗೆ ಬಂದಿದ್ದ ನೌಕೆಯಿಂದ 134 ಚೀಲಗಳ ಡ್ರಗ್ಸ್ ಪತ್ತೆ ಮಾಡಿ ವಶಕ್ಕೆ ಪಡೆದಿತ್ತು.

ಡ್ರಗ್ಸ್ ಬೆಲೆ ಅಂದಾಜು 12 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ ಗುಣಮಟ್ಟದ ಆಧಾರದ ಮೇಲೆ ಇದರ ಮಾರುಕಟ್ಟೆ ಬೆಲೆ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ದೇಶದಲ್ಲಿ ಇಷ್ಟು ಮಟ್ಟಿಗಿನ ಡ್ರಗ್ಸ್ ವಶಪಡಿಸಿಕೊಂಡಿರುವುದು ಇದೇ ಮೊದಲಾಗಿದೆ. ಮಾಲ್ಡೀವ್ಸ್, ಶ್ರೀಲಂಕಾ ಹಾಗೂ ಭಾರತಕ್ಕೆ ಕಳುಹಿಸಲು ಡ್ರಗ್ಸ್‌ನ್ನು ಹಡಗಿನಲ್ಲಿ ತರಲಾಗಿತ್ತು. ಶಂಕಿತ ಪಾಕಿಸ್ತಾನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!