ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ಅಮಲಿನಲ್ಲಿ ಟಿಪ್ಪರ್ ಚಾಲನೆ ಮಾಡಿ ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿಯೊಬ್ಬರಿಗೆ ಅಪಘಾತ ಎಸಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಸುಕಿನ ಜಾವ ನಡೆದಿದೆ.
ದುರದೃಷ್ಟವಶಾತ್ ಈ ಅಪಘಾತದಲ್ಲಿ ಸಾಹಿಲ್ ಪಟೇಲ್ (18) ಎಂಬಾತ ದಾರುಣ ಸಾವನ್ನಪ್ಪಿದ್ದಾನೆ. ಟಿಪ್ಪರ್ ಚಾಲಕ ಪಾನಮತ್ತನಾಗಿದ್ದನು ಮತ್ತು ಅವಸರದಲ್ಲಿ ಟ್ರಕ್ ಅನ್ನು ಚಾಲನೆ ಮಾಡುತ್ತಿದ್ದು ರಸ್ತೆ ಬದಿಯಲ್ಲಿ ನಿಂತಿದ್ದ ಯುವಕನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ನಂತರ ಇದೇ ಟಿಪ್ಪರ್ ರಸ್ತೆ ಬದಿಯಲ್ಲಿದ್ದ ಮರ, ಟ್ರ್ಯಾಕ್ಟರ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಅತಿವೇಗದಲ್ಲಿ ಸ್ಥಳದಿಂದ ಪರಾರಿಯಾಗಳು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯ ನಿವಾಸಿಗಳು ಟಿಪ್ಪರ್ ಗೆ ಕಲ್ಲು ಎಸೆದು ಚಾಲಕನನ್ನು ಟಿಪ್ಪರ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.