ಮದ್ಯ ಸೇವಿಸಿ ಕ್ಯಾಂಟರ್‌ ಚಲಾಯಿಸಿದ ಚಾಲಕ: ಇಬ್ಬರು ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕ್ಯಾಂಟರ್‌ ಚಲಾಯಿಸಿದ ಪರಿಣಾಮ ಇಬ್ಬರು
ಪಾದಚಾರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್​ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.

ಆಶಿಕ್ (28) ಮತ್ತು ಮನೋಜ್ ಕುಮಾರ್(30) ಮೃತ ದುರ್ದೈವಿಗಳು.

ಮದ್ಯ ಸೇವಿಸಿದ ಚಾಲಕ ಅಡ್ಡಾದಿಡ್ಡಿಯಾಗಿ ಕ್ಯಾಂಟರ್ ಚಲಾಯಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಂಟರ್‌ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸ್​​ ಬ್ಯಾರಿಕೇಡ್​ಗಳಿಗೆ ಗುದ್ದಿ ಉರುಳಿ ಬಿದ್ದಿದೆ.

ಘಟನಾ ಸ್ಥಳಕ್ಕೆ ಹೆಬ್ಬಗೋಡಿನ ಪೊಲೀಸರು ಭೇಟಿ ನೀಡಿ, ಚಾಲಕ ಹಾಗೂ ಕ್ಲೀನರ್​ನನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here