ಯುಎಇಯಲ್ಲಿ 33 ಕೋಟಿ ಮೌಲ್ಯದ ಲಾಟರಿ ಗೆದ್ದ ಭಾರತೀಯ ಚಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಮೂಲದ ದುಬೈ ಚಾಲಕ ಅಜಯ್ ಒಗುಲಾ ಅವರು ಎಮಿರೇಟ್ಸ್ ಡ್ರಾದಲ್ಲಿ ಬರೋಬ್ಬರಿ ₹ 33 ಕೋಟಿ ಬಹುಮಾನ ಗೆದ್ದಿದ್ದಾರೆ.
“ನಾನು ಜಾಕ್‌ಪಾಟ್ ಹೊಡೆದಿದ್ದೇನೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ” ಎಂದು ಅಜಯ್ ಸಂಭ್ರಮ ಪಟ್ಟರು ಎಂದು ಯುಎಇ ದಿನಪತ್ರಿಕೆ ಖಲೀಜ್ ಟೈಮ್ಸ್ ವರದಿ ಮಾಡಿದೆ.
ದಕ್ಷಿಣ ಭಾರತದ ಹಳ್ಳಿಯೊಂದರಿಂದ ಅಜಯ್ ಒಗುಲಾ ನಾಲ್ಕು ವರ್ಷಗಳ ಹಿಂದೆ ಯುಎಇಗೆ ಬಂದಿದ್ದಾರೆ. ಪ್ರಸ್ತುತ ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಅವರು ಪ್ರತಿ ತಿಂಗಳು 3,200 ದಿರ್ಹಮ್ ಗಳಿಸುತ್ತಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
“ನಾನು ಈ ಹಣವನ್ನು ನನ್ನ ಚಾರಿಟಿ ಟ್ರಸ್ಟ್ ಗೆ ವಿನಿಯೋಗಿಸುತ್ತೇನೆ. ಇದು ನನ್ನ ತವರು ಮತ್ತು ನೆರೆಯ ಹಳ್ಳಿಗಳಲ್ಲಿ ಮೂಲಭೂತ ಅಗತ್ಯಗಳನ್ನು ಪಡೆಯಲು ಅನೇಕ ಜನರಿಗೆ ಸಹಾಯ ಮಾಡುತ್ತದೆ” ಎಂದು ಅಜಯ್ ಒಗುಲಾ ಹೇಳಿದರು.
ಅವರು ಜಾಕ್‌ಪಾಟ್ ಹೊಡೆದು ಮಿಲಿಯನೇರ್ ಆಗಿದ್ದಾರೆ ಎಂದು ಭಾರತದಲ್ಲಿನ ಅವರ ಕುಟುಂಬಕ್ಕೆ ಸುದ್ದಿ ತಿಳಿಸಿದಾಗ, ಅವರ ತಾಯಿ ಮತ್ತು ಒಡಹುಟ್ಟಿದವರು ನಂಬಲಿಲ್ಲ ಎಂದು ಅವರು ಹೇಳಿದರು. “ಈಗ ನಾನು ಸುದ್ದಿಯಲ್ಲಿರುವುದರಿಂದ ಅವರು ಈಗ ಅದನ್ನು ನಂಬಬೇಕಾಗುತ್ತದೆ” ಎಂದು ಒಗುಲಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!