ಹೀಗಿದೆ 2022ರಲ್ಲಾದ ಉದ್ಯೋಗ ನಷ್ಟದ ಚಿತ್ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ನಂತರದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸ್ಟಾರ್ಟಪ್‌ಗಳೂ ಕೂಡ ತಮ್ಮ ವಿಸ್ತರಣಾ ಯೋಜನೆಯನ್ನು ಮೊಟಕುಗೊಳಿಸಿ ಮುಂಬರುವ ಆರ್ಥಿಕ ಹಿಂಜರಿತವನ್ನು ಎದುರಿಸಲು ಸಜ್ಜಾಗುತ್ತಿವೆ. ಉದ್ಯೋಗಿಗಳ ಸಂಖ್ಯೆಗೆ ಕಡಿವಾಣ ಹಾಕಿ ಕಾರ್ಯಕ್ಷಮತೆಯನ್ನು ಹೆಚ್ಚುಸುತ್ತ ದಕ್ಷತೆಯೆಡೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತ ವೆಚ್ಚಕಡಿತಕ್ಕೆ ಮುಂದಾಗಿವೆ. ಅಮೇಜಾನ್‌, ಮೆಟಾ, ಟ್ವೀಟರ್‌ ಹೀಗೆ ದೈತ್ಯ ಕಂಪನಿಗಳಿಂದ ಸಾವಿರಾರು ಜನರನ್ನು ಹೊರಹಾಕಲಾಗಿದೆ. ಒಂದು ವರದಿಯ ಪ್ರಕಾರ ಉದ್ಯೋಗ ಕಡಿತದ ಸಂಖ್ಯೆ 2007 ರಿಂದ 2009ರ ನಡುವಿನ ಗ್ರೇಟ್‌ ರಿಸೇಷನ್‌ ಮಟ್ಟವನ್ನೂ ಮೀರಿಸಿದೆ.

ಈ ಉದ್ಯೋಗಕಡಿತವನ್ನು ಅಂಕಿ ಅಂಶಗಳ ಮೂಲಕ ವಿವರಿಸುವುದಾದರೆ ಈಗಾಗಲೇ ಸರಿಸುಮಾರು 16,000 ಉದ್ಯೋಗಿಗಳನ್ನು 44 ಸ್ಟಾರ್ಟ್‌ಅಪ್‌ಗಳು ವಜಾಗೊಳಿಸಿವೆ, ಇದರಲ್ಲಿ ಯೂನಿಕಾರ್ನ್ ಸ್ಥಾನಮಾನ ಹೊಂದಿರುವ (1 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯ ಹೊಂದಿರುವ) ಚಾರ್ಜ್‌ಬೀ, ಕಾರ್ಸ್ 24, ಲೀಡ್, ಬೈಜುಸ್, ಓಲಾ, ಮೀಶೋ, ಎಂಪಿಎಲ್, ಇನ್ನೋವಾಕರ್, ಉಡಾನ್, ಅನಾಕಾಡೆಮಿ ಮತ್ತು ವೇದಾಂತುಗಳಂಥ ಎಡ್ಟೆಕ್ (Edtech) ಕಂಪನಿಗಳು ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದೆ, ಈ ವಲಯದಲ್ಲಿ 14 ಸ್ಟಾರ್ಟ್‌ಅಪ್‌ಗಳು 2022 ರಲ್ಲಿ ಸುಮಾರು 7,000 ಉದ್ಯೋಗಿಗಳನ್ನು ವಜಾಗೊಳಿಸಿವೆ.

ಐಟಿ ಕಂಪನಿಗಳೂ ಸಹ ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡುತ್ತಿದ್ದು ವರದಿಯೊಂದರ ಪ್ರಕಾರ ಕಳೆದ ವರ್ಷ ಅಕ್ಟೋಬರ್‌ ಹೋಲಿಸಿದರೆ ನೇಮಕಾತಿ ಪ್ರಕ್ರಿಯೆಯು 18 ಶೇ. ಕುಸಿದಿದೆ. ನೆಟ್‌ಫ್ಲಿಕ್ಸ್, ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಪೋಷಕ ಆಲ್ಫಾಬೆಟ್ ಮತ್ತು ಆಪಲ್‌ ಕಂಪನಿಗಳು 2.5 ಟ್ರಿಲಿಯನ್ ಡಾಲರ್‌ಗಳ ಸಾಮೂಹಿಕ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ. ಜಾಗತಿಕವಾಗಿ, 930 ಟೆಕ್ ಕಂಪನಿಗಳು 2022 ರಲ್ಲಿ 1,46,407 ಉದ್ಯೋಗಿಗಳನ್ನು ವಜಾಗೊಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!