ಟಾಲಿವುಡ್​ ನಲ್ಲಿ ಡಬ್ಬಿಂಗ್ ಸದ್ದು: ಹಬ್ಬಗಳಂದು ಬೇಡ ಬೇರೆ ಸಿನಿಮಾಗಳ ಪ್ರದರ್ಶನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡಬ್ಬಿಂಗ್​ ಸಿನಿಮಾಗಳ ವಿಷಯದಲ್ಲಿ ಟಾಲಿವುಡ್ ನಿರ್ಮಾಪಕರು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. 2023ರ ಸಂಕ್ರಾಂತಿಯಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ಚಿತ್ರಗಳನ್ನು ಹೊರತು ಪಡಿಸಿ ಬೇರೆ ಭಾಷೆಯ ಡಬ್ಬಿಂಗ್​ ಸಿನಿಮಾಗಳಿಗೆ ಚಿತ್ರಮಂದಿರ ನೀಡಬಾರದು ಎಂದು ತೆಲುಗು ನಿರ್ಮಾಪಕರ ಸಂಘವು ಎಲ್ಲ ವಿತರಕರಿಗೆ ಮತ್ತು ಪ್ರದರ್ಶಕರಿಗೆ ಸೂಚನೆ ನೀಡಿದೆ.

ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಹಂಚಿಕೊಂಡಿರುವ ಮನವಿಯಲ್ಲಿ ಹಬ್ಬಗಳಂತಹ ಸಮಯದಲ್ಲಿ ಥಿಯೇಟರ್‌ಗಳಲ್ಲಿ ತೆಲುಗಿನಲ್ಲೇ ನಿರ್ಮಿಸಿದ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಸಂಸ್ಥೆ ಹೇಳಿದೆ.

2023 ಸಂಕ್ರಾಂತಿ ವಾರಾಂತ್ಯದಲ್ಲಿ ಎರಡು ದೊಡ್ಡ ತಮಿಳು ಚಿತ್ರಗಳಾದ ವರಿಸು ಮತ್ತು ತುನಿವು ಬಿಡುಗಡೆಯಾಗುತ್ತಿವೆ. ಇದೀಗ ಈ ಬಗ್ಗೆ ಆ ಸಿನಿಮಾ ಅಭಿಮಾನಿಗಳು ಈಗ ಚಿಂತಿತರಾಗಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ, ತೆಲುಗು ಚಲನಚಿತ್ರಗಳ ನಿರ್ಮಾಣ ವೆಚ್ಚ ಹೆಚ್ಚಳವಾಗಿದ್ದು, ನಿರ್ಮಾಪಕರ ಕಲ್ಯಾಣ ಮತ್ತು ತೆಲುಗು ಚಲನಚಿತ್ರೋದ್ಯಮವನ್ನು ಉಳಿಸಲು, ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯು ತನ್ನ ತುರ್ತು ಸಭೆಯನ್ನು 08.12.2019 ರಂದು ಆಯೋಜಿಸಿದೆ. ಸಂಕ್ರಾಂತಿ ಮತ್ತು ದಸರಾ ಹಬ್ಬಗಳಲ್ಲಿ ತೆಲುಗು ನೇರ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದಿದೆ.

2019 ರಲ್ಲಿ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ತೆಗೆದುಕೊಂಡ ನಿರ್ಧಾರವನ್ನು ಮತ್ತು ಚಲನಚಿತ್ರ ನಿರ್ಮಾಪಕ ದಿಲ್ ರಾಜು ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಳೆಯ ಆದೇಶವನ್ನು ಮತ್ತೊಮ್ಮೆ ಒತ್ತಿ ಹೇಳುತ್ತಿದೆ.

ಜನವರಿಯಲ್ಲಿ ಬರುವ ಸಂಕ್ರಾಂತಿ-ಪೊಂಗಲ್ ವಾರಾಂತ್ಯವು ರಾಜ್ಯದಲ್ಲಿ ಮುಂದಿನ ಮೊದಲ ದೊಡ್ಡ ಹಬ್ಬವಾಗಿದೆ. ಕಿಕ್ಕಿರಿದ ವಾರಾಂತ್ಯದಲ್ಲಿ ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್, ನಂದಮೂರಿ ಬಾಲಕೃಷ್ಣ ಅಭಿನಯದ ವೀರ ನರಸಿಂಹ ರೆಡ್ಡಿ ಮತ್ತು ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ ಮೂರು ತೆಲುಗು ಚಿತ್ರಗಳು ಬಿಡುಗಡೆಯಾಗಲಿವೆ.

ಒಂದು ವೇಳೆ ಸಂಕ್ರಾಂತಿ, ದಸರಾ ಮುಂತಾದ ಹಬ್ಬದ ಸಂದರ್ಭದಲ್ಲಿ ಆಂಧ್ರ ಮತ್ತು ತೆಲಂಗಾಣದ ಥಿಯೇಟರ್​ಗಳಲ್ಲಿ ತೆಲುಗು ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಠಿಣ ತೀರ್ಮಾಣ ತೆಗೆದುಕೊಂಡರೆ ಬೇರೆ ಭಾಷೆಯ ಚಿತ್ರಗಳಿಗೆ ತೊಂದರೆ ಆಗಲಿದೆ. ಅದೇ ರೀತಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದಲ್ಲೂ ಇಂಥ ಪರಿಸ್ಥಿತಿ ನಿರ್ಮಾಣವಾದರೆ ಪ್ಯಾನ್​ ಇಂಡಿಯಾ​ ಚಿತ್ರಗಳ ಮಾರುಕಟ್ಟೆಗೆ ದೊಡ್ಡ ಪೆಟ್ಟು ಬೀಳುವುದು ಖಚಿತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!