ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು, ಕಾಫಿನಾಡಿನಲ್ಲಿ ಮೊದಲ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಬರಗಾಲದಿಂದಾಗಿ ಬೇಸತ್ತು ಇಟ್ಟ ಬೆಳೆ ಬಾರದ ಕಂಗೆಟ್ಟ ರೈತ ತನ್ನ ಹೊಲದಲ್ಲಿಯೇ ನೇಣಿಗೆ ಶರಣಾದ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ 49ವರ್ಷದ ಸತೀಶ್, ಮೃತ ರೈತ. ಎರಡು ಎಕರೆ ಜಮೀನಿನಲ್ಲಿ ಸಾಲ ಸೋಲ ಮಾಡಿ ಇಟ್ಟಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಇತ್ತ ಬೆಳೆಯಿಲ್ಲದೆ, ಮಾಡಿದ ಸಾಲ ತೀರಿಸಲಾಗದೆ ಮನನೊಂದು ಹೊಲದಲ್ಲಿಯೇ ನೇಣಿನ ಕುಣಿಕೆಗೆ ಕೊರಳಿಡ್ಡಿದ್ದಾರೆ.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.