Monday, October 2, 2023

Latest Posts

VTU ವೇಳಾಪಟ್ಟಿ ಪ್ರಕಟ: ಸೆ. 4ರಿಂದ ಇಂಜಿನಿಯರಿಂಗ್ ತರಗತಿಗಳು ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಸೆಪ್ಟೆಂಬರ್ 4ರಿಂದ ಇಂಜಿನಿಯರಿಂಗ್ ಕಾಲೇಜುಗಳ ಮೊದಲ ಸೆಮಿಸ್ಟರ್ ತರಗತಿಗಳು ಪ್ರಾರಂಭವಾಗಲಿವೆ.

ಶೈಕ್ಷಣಿಕ ವೇಳಾಪಟ್ಟಿ ಹೀಗಿದೆ:

ಮೊದಲ 10 ದಿನ ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಗತಿಗಳು ನಡೆಯಲಿವೆ.
ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಮೊದಲ ಸೆಮಿಸ್ಟರ್ ಪಾಠಗಳು ಶುರುವಾಗಲಿವೆ. 2024ರ ಜನವರಿ 6ರೊಳಗೆ ಬೋಧನಾ ಕಾರ್ಯ ಪೂರ್ಣಗೊಳಿಸಲಾಗುವುದು.

ಜನವರಿ 8 ರಿಂದ 19 ರವರೆಗೆ ಪ್ರಾಯೋಗಿಕ ಪರೀಕ್ಷೆ, ಜನವರಿ 22 ರಿಂದ ಫೆಬ್ರವರಿ 17ರವರೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಫೆಬ್ರವರಿ 19 ರಿಂದ ಎರಡನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!