Wednesday, September 27, 2023

Latest Posts

ದಿನಭವಿಷ್ಯ: ನಿಮ್ಮದೇ ಕಠಿಣ ನಿಲುವಿನಿಂದ ಕಚೇರಿ, ಮನೆ ಎಲ್ಲಿಯೂ ನೆಮ್ಮದಿ ಇರದಂತೆ ಆಗಬಹುದು!

ಮೇಷ
ಮನೆಯ ಕೆಲವು ಸಮಸ್ಯೆ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಎಲ್ಲದರಲ್ಲಿಯೂ ನಿರಾಸಕ್ತಿ. ಅಸಹನೆ ಹೆಚ್ಚಳ.

ವೃಷಭ
ನಿಮ್ಮ ಕೆಲವು ಚಿಂತನೆಯಲ್ಲಿ ಇಂದು ಬದಲಾವಣೆ ಆದೀತು. ಅದರಿಂದ ನಿಮಗೆ ಮಾನಸಿಕ ನಿರಾಳತೆ  ದೊರಕುವುದು.ಗೊಂದಲ ನಿವಾರಣೆ.

ಮಿಥುನ
ಕೆಲವು ವ್ಯವಹಾರ ನಿಮಗೆ ಪೂರಕವಾಗಿ ಸಾಗದು.ಎಲ್ಲರ ಜತೆ ಸಹಕಾರದಿಂದ ಕಾರ್ಯ ಸಾಧಿಸಿಕೊಳ್ಳಿ. ಯಾರನ್ನೂ ದೂರ ಮಾಡದಿರಿ.

ಕಟಕ
ನಿಮ್ಮ ಕಠಿಣ ನಿಲುವು  ಮನೆ, ಕಚೇರಿಯಲ್ಲಿ ಶಾಂತಿ ಕೆಡಿಸಬಹುದು.ಕೆಲವು ವಿಷಯಗಳಲ್ಲಿ ನಿಮ್ಮ ನಿಲುವು ಸಡಿಲಿಸುವುದು ಒಳ್ಳೆಯದು.

ಸಿಂಹ
ಅನಿಯಂತ್ರಿತ ಆಹಾರ ಸೇವನೆಯಿಂದ ಆರೋಗ್ಯಕೆಟ್ಟೀತು. ಎಚ್ಚರ ವಹಿಸಿರಿ. ಕೌಟುಂಬಿಕ ಬಿಕ್ಕಟ್ಟು ಕೆಲವರ ಮಧ್ಯಸ್ಥಿಕೆ ಯಿಂದ ಪರಿಹಾರ.

ಕನ್ಯಾ
ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿ.  ರೋಷಾವೇಷದಿಂದ ಯಾವುದೇ ಫಲವಿಲ್ಲ. ಶಾಂತಿ, ಸಹನೆಯಿಂದ ಪರಿಸ್ಥಿತಿ ನಿಭಾಯಿಸಿರಿ. ಆರ್ಥಿಕ ಒತ್ತಡ ಹೆಚ್ಚು.

ತುಲಾ
ಮನೆಯ ಕಾರ್ಯದಲ್ಲಿ ನೀವೂ ನೆರವಾಗಿ.  ಅದರಿಂದ ಕೌಟುಂಬಿಕ ಹೊಣೆಗಾರಿಕೆ ಸುಲಭದಲ್ಲಿ ನಿಭಾಯಿಸಬಹುದು. ಆರ್ಥಿಕ ಉನ್ನತಿ.

ವೃಶ್ಚಿಕ
ನಿಮ್ಮ ನಿಲುವಿಗೇ ಅಂಟಿಕೊಂಡು  ಕೂರಬೇಡಿ. ನಿಮ್ಮ ಸುತ್ತಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ವೃತ್ತಿಯಲ್ಲಿ ಯಶಸ್ಸು.

ಧನು
ಒಂದೆಡೆಯಿಂದ ವೃತ್ತಿಯ ಒತ್ತಡ, ಮತ್ತೊಂದೆಡೆಯಿಂದ ಕೌಟುಂಬಿಕ ಕಟ್ಟುಪಾಡು.ಇದು ನಿಮ್ಮ ದಿನವನ್ನು ಬಿಝಿಯಾಗಿಡುತ್ತದೆ.

ಮಕರ
ಕೇವಲ ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಸಾಮರ್ಥ್ಯದ ಕುರಿತು ಹೆಚ್ಚು ವಿಶ್ವಾಸವಿಡಿ.  ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಬೇಡಿ.ಆರ್ಥಿಕ ಸುಸ್ಥಿತಿ.

ಕುಂಭ
ಕುಟುಂಬ ಸದಸ್ಯರ  ಮಧ್ಯೆ ಅಭಿಪ್ರಾಯ ಭೇದ ಉಂಟಾದೀತು. ಅದನ್ನು ಕೂಡಲೇ ಶಮನಗೊಳಿಸಿರಿ. ಬಂಧುಗಳ ಸಹಕಾರ. ಸಿಗುವುದು.

ಮೀನ
ವೃತ್ತಿಯ ಒತ್ತಡ ಹೆಚ್ಚು. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಇತರರಿಂದ ಸೂಕ್ತ ಸಹಕಾರ ಸಿಗದೆ ಅಸಹನೆ ಹೆಚ್ಚುವುದು. ಸಹನೆ ಕಳಕೊಳ್ಳದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!