ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್, ಮೆಟ್ರೋ, ಹಾಲು ದರ ಏರಿಕೆಯ ಬೆನ್ನಲ್ಲೇ ಈಗ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಅದರಲ್ಲೂ ಲೀಟರ್‌ಗೆ 300 ರೂ. ಗಡಿ ದಾಟಿದೆ.
ಖಾದ್ಯ ತೈಲ ಬೆಲೆ ಕಳೆದ ಒಂದು ತಿಂಗಳಿಂದ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10-20 ರೂ. ಏರಿಕೆ ಕಂಡಿದೆ.
ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ.