VIRAL VIDEO | ಹೋಳಿ ಆಚರಣೆ ವೇಳೆ ವಿದೇಶಿ ಯುವತಿಗೆ ಕಿರುಕುಳ, ಸಾಮೂಹಿಕ ದೌರ್ಜನ್ಯದ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಹೋಳಿ ಹಬ್ಬದ ಸಂಭ್ರಮಕ್ಕೆ ಅದರದ್ದೇ ಆದ ವಿಶೇಷ ಗೌರವವಿದೆ. ಆದರೆ ಕೆಲವರ ನಡೆಯಿಂದಾಗಿ ಇಡೀ ಹಬ್ಬಕ್ಕೆ ಕಳಂಕ ತರುವ ವಾತಾವರಣ ಸೃಷ್ಟಿಯಾಗುತ್ತದೆ. ಇತ್ತೀಚೆಗಷ್ಟೇ ಸಾಕಷ್ಟು ಹೆಣ್ಣುಮಕ್ಕಳಿಗೆ ಹೋಳಿ ಹಬ್ಬದ ಸಂಭ್ರಮದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತದೆ ಎನ್ನುವ ಜಾಹೀರಾತೊಂದನ್ನು ಭಾರತ್ ಮ್ಯಾಟ್ರಿಮೊನಿ ನೀಡಿತ್ತು.

ಇದಕ್ಕೆ ನಿದರ್ಶನದಂತೆ ಇದೀಗ ಜಪಾನಿ ಯುವತಿಗೆ ಹೋಳಿ ಹಬ್ಬದಂದು ಹಿಂಸೆ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹುಡುಗರ ಗುಂಪೊಂದು ಯುವತಿಗೆ ಬಣ್ಣ ಬಳಿದಿದೆ. ಈ ವೇಳೆ ಆಕೆಯ ಖಾಸಗಿ ಅಂಗಗಳಿಗೂ ಯುವಕರು ಬಣ್ಣ ಹಚ್ಚುವ ನೆಪದಲ್ಲಿ ಮುಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

 

ವಿಡಿಯೋದಲ್ಲಿ ನಾಲ್ಕೈದು ಹುಡುಗರು ಜಪಾನಿ ಯುವತಿಯನ್ನು ಎಳೆದಾಡಿ, ಮೊಟ್ಟೆ ಹೊಡೆದು ಬಣ್ಣ ಹಚ್ಚಿದ್ದಾರೆ. ಆಕೆಯ ಖಾಸಗಿ ಭಾಗವನ್ನು ಮುಟ್ಟಲು ಯತ್ನಿಸಿದ್ದು, ಯುವತಿ ಕಪಾಳಕ್ಕೆ ಬಾರಿಸಿದ್ದಾಳೆ. ಯಾವುದೇ ದೂರು ದಾಖಲಾಗದ ಕಾರಣ ಪೊಲೀಸರು ಯುವಕರನ್ನು ಬಂಧಿಸಿರಲಿಲ್ಲ. ಆದರೆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ದೆಹಲಿಯ ಪಹರ್‌ಗಂಜ್‌ನಲ್ಲಿ ತಂಗಿದ್ದ ಮೂವರು ಯುವಕರನ್ನು ಬಂಧಿಸಿದ್ದಾರೆ.

ಯುವತಿ ಭಾರತ ಬಿಟ್ಟು ಇದೀಗ ಬಾಂಗ್ಲಾದೇಶಕ್ಕೆ ತೆರಳಿದ್ದು, ಮಾನಸಿಕವಾಗಿ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗೆ ಭಾರೀ ಟೀಕೆ ಎದುರಾಗಿದೆ, ಫಾರೀನ್‌ನಿಂದ ಬಂದವರನ್ನು ಇಷ್ಟು ಕೆಟ್ಟದಾಗಿ ನೋಡಿಕೊಳ್ಳೋದು ಯಾಕೆ? ನಿಮ್ಮ ತಂಗಿ, ತಾಯಿ ಈ ಜಾಗದಲ್ಲಿ ಇದ್ದಿದ್ದರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!